ಚಿತ್ರದುರ್ಗ: ಜಿಲ್ಲಾ ರಕ್ಷಣಾಧಿಕಾರಿ ಕಾರ್ಯವೈಕರಿ ಆರಂಭದ ಶೂರತ್ವ ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ಹೇಳಿದರು.

ನಗರದ ಐಬಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಸ ಎಸ್.ಪಿ ಬಂದಾಗ ಮರಳು ದಂಧಯಿಂದ ಹಿಡಿದು ಎಲ್ಲವನ್ನು ಕಂಟ್ರೂಲ್ ಮಾಡಿದರು. ಆದರೆ ಬರು ಬರುತ್ತಾ ಎಲ್ಲಾ ದಂಧೆಗಳು ರಾಜಾರೋಷವಾಗಿ ನಡೆಯುತ್ತಿವೆ ಕಂಟ್ರೂಲ್ ಮಾಡುತ್ತಿಲ್ಲ ಹಾಗದಾರೆ ಎಸ್.ಪಿಯವರ ಆರಂಭ ಶೂರತ್ವ ಅಲ್ಲದೆ ಮತ್ತೇನು ಎಂದರು.

ಮೊದಲು ಬಂದಾಗ ಆರಂಭದ ಶೂರತ್ವ ತೋರಿಸುವ ಮುಖಾಂತರ ಮಾಮೂಲಿಯನ್ನು ಜಾಸ್ತಿ ಮಾಡಿಕೊಳ್ಳುವ ಹುನ್ನಾರ. ಹೊಸದುರ್ಗದ ಶಾಸಕರು ಮರಳು ದಂಧೆಯನ್ನು ತಡೆಯಬೇಕೆಂದು ಹಲವು ಸಲ ಇಲಾಖೆಯ ಅಧಿಕಾರಿಗಳಿಗೆ ಹೇಳಿದ್ದಾರೆ. ಆದ್ರೆ ಇಲಾಖೆಯವರು ದಂಧೆಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಹೊಸದುರ್ಗದ ಶಾಸಕರು ನಿನ್ನೆ ಪೆಟ್ರೋಲ್ ಸುರಿದುಕೊಂಡಿದ್ದಾರೆ. ಇದೇ ರೀತಿಯಾಗಿ ಮುಂದುವರೆದರೆ ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಬೇಕಾಗುತ್ತದೆ ಎಂದು ಖಾರವಾಗಿ ಹೇಳಿದರು.