ಚಿತ್ರದುರ್ಗ:ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದಲ್ಲಿಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ದಂತಭಾಗ್ಯ ಯೋಜನೆಯ ದಂತ ಪಂಕ್ತಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|| ಜಿ.ಎನ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಈ ದಂತಭಾಗ್ಯ ಯೋಜನೆಯಿಂದ ಜನರಿಗೆ ತುಂಬಾ ಉಪಯೋಗವಾಗುತ್ತಿದೆ ಹಾಗೂ ಈ ಯೋಜನೆಯು ವೈದ್ಯರನ್ನು ಜನರಿಗೆ ತಲುಪುವಂತೆ ಮಾಡಿದೆ. ಇದರಿಂದ ಪ್ರತಿ ಹಳ್ಳಿಯ ಬಡತನದ ರೇಖೆಯ ಕೆಳಗಿರುವ ಜನರಿಗೆ ಬಹಳ ಉಪಯೋಗವಾಗುತ್ತಿದೆ. ಇದರಿಂದ ಯುವವೈದ್ಯರಲ್ಲಿ ಸಮಾಜ ಸೇವೆಯ ಭಾವನೆ ಮೂಡುತ್ತದೆ ಎಂದು ತಿಳಿಸಿದರು. ಈ ಸೌಲಭ್ಯದ ಮಾಹಿತಿಯನ್ನು ಪರಿಚಿತರಿಗೆ ಮತ್ತು ಸಂಬಂಧಿಕರಿಗೆ ತಿಳಿಸಲು ದಂತಪಂಕ್ತಿಯನ್ನು ಪಡೆದ ರೋಗಿಗಳಿಗೆ ಹೇಳಿದರು.
ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಈ.ಚಿತ್ರಶೇಖರ್. ಕಾಲೇಜಿನ ಪ್ರಾಂಶುಪಾಲರಾದ ಡಾ|| ಆರ್. ಗೌರಮ್ಮ
ಕೃತಕ ದಂತ ವಿಭಾಗದ ಮುಖ್ಯಸ್ಥರಾದ ಡಾ|| ಸುನಿಲ್.ವಿ.
ಇದೇ ಸಂದರ್ಭದಲ್ಲಿ ೨೧ ಜನ ಅರ್ಹ ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ದಂತ ಪಂಕ್ತಿಗಳನ್ನು ಕಾರ್ಯನಿರ್ವಾಹಕ ನಿರ್ದೇಶಕರು, ಪ್ರಾಂಶುಪಾಲರು ಹಾಗೂ ವೈದ್ಯರು ವಿತರಿಸಿದರು.
ದಂತ ಭಾಗ್ಯ ಯೋಜನೆಯ ನೋಡಲ್ ಅಧಿಕಾರಿಗಳಾದ ಡಾ|| ಸಚಿನ್ ನಾಯ್ಕ ಸ್ವಾಗತಿಸಿದರು, ಡಾ|| ನೌಷಿನ್ ಹಜೀರಾ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.