ಚಿತ್ರದುರ್ಗ: ಇತ್ತೀಚೆಗೆ ಜರುಗಿದ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿರುವ ಮೌಲ್ಯಮಾಪನ ಕೇಂದ್ರಗಳ ಸುತ್ತ 200 ಮೀಟರ್ ವಾಪ್ತಿಯಲ್ಲಿ ಏ.9 ರಿಂದ ಮೌಲ್ಯಮಾಪನ ಮುಗಿಯುವರೆಗೂ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಆದೇಶ ಹೊರಡಿಸಿದ್ದಾರೆ.

ಮೌಲ್ಯಮಾಪನ ನಡೆಯುವ ಕೇಂದ್ರಗಳ ವಿವರ ಇಂತಿದೆ : ಕನ್ನಡ- ವಾಸವಿ ಪ್ರೌಢಶಾಲೆ, ಇಂಗ್ಲೀಷ್-ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ, ಹಿಂದಿ- ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆ, ಗಣಿತ- ಚಿನ್ಮೂಲಾದ್ರಿ ರಾಷ್ಟ್ರೀಯ ಪ್ರೌಢಶಾಲೆ, ವಿಜ್ಞಾನ- ವಿಧ್ಯಾವಿಕಾಸ ಪ್ರೌಢಶಾಲೆ, ಸಮಾಜ ವಿಜ್ಞಾನ- ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆ.