ಚಿತ್ರದುರ್ಗ: ಲೋಕೋಪಯೋಗಿ ಇಲಾಖೆ  ಹಿರಿಯೂರು ಉಪ ವಿಭಾಗದ  ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೃಷ್ಣಪ್ಪ ಹಾಗೂ ಕಿರಿಯ ಇಂಜಿನಿಯರ್ ಪುಟ್ಟಸ್ವಾಮಿ ಇವರು 48 ಸಾವಿರ ಲಂಚ ಸ್ವೀಕರಿಸುವ ವೇಳೆ ಎ.ಸಿ.ಬಿ ಬಲೆಗೆ ಸಿಕ್ಕಿದ್ದಾರೆ. 

ಪಾವಗಡ ತಾ: ಕೆ.ಟಿ.ಹಳ್ಳಿ ಮಂಜುನಾಥ ಎರಡನೇ ದರ್ಜೆ ಗುತ್ತಿಗೆದಾರರಾಗಿದ್ದು ಕಾಮಗಾರಿ  ಬಿಲ್ ಪಾವತಿಸಲು 48 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. 

ಮಾರ್ಚ್ 14 ರ ಸಂಜೆ ಕಚೇರಿಯಲ್ಲಿ ಹಣ ಪಡೆಯುವಾಗ ಬಂಧಿಸಿ ಪ್ರಕರಣ ದಾಖಲಿಸಿ  ತನಿಖೆ ಕೈಗೊಳ್ಳಲಾಗಿದೆ. ಎ.ಸಿ.ಬಿ ಉಪಾಧೀಕ್ಷಕರಾದ ಮಂಜುನಾಥರವರ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಪ್ರಕಾಶ್ ರವರು ಹಾಗೂ  ಸಿಬ್ಬಂದಿಯವರು ದಾಳಿ ನಡೆಸಿರುವರು.