ಇನ್ನು ಸ್ಟಾಕ್ ಇಲ್ಲ ಎಂಬ ಉತ್ತರ ಬಂದರೆ, ಕೆಳಗೆ ವಿವರಿಸಿದಂತೆ ಕಂಪ್ಲೇಂಟ್ ಮಾಡಿ.. ತಕ್ಷಣ   ಪರಿಹಾರ..
ಜನಕೋಟಿಗೆ ಮಾನ್ಯ ಮೋದಿ ಸರ್ಕಾರದ ಕೊಡುಗೆ.

ದೇಶದ ಕೋಟ್ಯಾಂತರ LPG ಗ್ರಾಹಕರಿಗೆ “ಏಕ ಗವಾಕ್ಷಿ” (Single Window) ಯೋಜನೆ!!!

ಬಹಳಷ್ಟು LPG ಗ್ರಾಹಕರು ತಮ್ಮ Gas Distributor ಗೆ ತಮ್ಮ Gas cylinder ಸರಬರಾಜಾಗಿಲ್ಲ ಎಂದು ಫೊನ್ ಮಾಡಿ ತಿಳಿಸಿದಾಗ, ದೊರೆಯುವ ಉತ್ತರ “ದಾಸ್ತಾನು ಇಲ್ಲ! No Stock!!!” ಈ ಉತ್ತರ ದಿಂದ ಬಳಷ್ಟು ಗ್ರಾಹಕರು ಸುಮ್ಮನಾಗುತ್ತಾರೆ. ಗ್ರಾಹಕರು ಫೋನ್ ಮಾಡುವ ಮೊದಲು ಅವರ ಗ್ರಾಹಕ ಸಂಖ್ಯೆಗೆ “ಬಿಲ್ಲ್ ಆಗಿರುತ್ತದೆ” ಈ ಸಂದರ್ಭದಲ್ಲಿ No Stock ಎನ್ನುವ ಉತ್ತರವು ಕಾನೂನಿನ ಮಿತಿಯಲ್ಲಿ ಸರಿಯೇ? ಒಂದು ನಿಮಿಷ ಯೋಚಿಸಿ!

ನಮ್ಮ ದೇಶದ ಸರ್ಕಾರಿ ಸ್ವಾಮ್ಯದ ಇಂಧನ ಮಾರಾಟ ಸಂಸ್ಥೆಗಳಾದ IOC, BPCL ಮತ್ತು HPCLಗಳು LPG ಗ್ರಾಹಕರ ಅವಶ್ಯಕತೆಯನ್ನು ಪೂರೈಸುತ್ತವೆ. ಅದರೆ ಈ ಮೂರು ಕಂಪೆನಿಗಳ ಶೇ.50ಕ್ಕೂ ಹೆಚ್ಚು Distributorಗಳು ಆ ಊರಿನ ಮಾಜಿ/ಹಾಲಿ MLA, MP ಆಥವಾ ಅವರ ಕೃಪಾಪೋಷಿತರು! ಈ ಕಾರಣದಿಂದಲೂ ಹಲವು ಗ್ರಾಹಕರು ತಮ್ಮ ಹಕ್ಕುಗಳ ಪ್ರತಿಪಾದನೆಯಲ್ಲಿ ಹಿಂದೇಟು ಹಾಕುತ್ತಾರೆ.
ಈ ಎಲ್ಲಾ ಸತ್ಯಗಳನ್ನು ಮನಗಂಡಿರುವ ಕೇಂದ್ರ ಸರ್ಕಾರವು LPG ಗ್ರಾಹಕರ ಕುಂದು ಕೊರತೆಯನ್ನು ನೀಗಿಸಲು ಮತ್ತು ಈ Distributorಗಳು ಗ್ರಾಹಕರ Cylinderಗಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಯಲು ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಅದುವೇ My LPG.in ಸರ್ಕಾರಗಳು ಜನಹಿತಕ್ಕಾಗಿ ಯೋಜನೆಗಳು ತರುತ್ತವೆ ಆದರೆ ದೇಶದ ಹೆಚ್ಚಿನ ಪ್ರಜೆಗಳು ಅವಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದೇ ಇಲ್ಲ! ಬದಲಿಗೆ ಸರ್ಕಾರ ನಮಗೇನು ಮಾಡಿಲ್ಲ ಎಂದು ಹಿಡಿಶಾಪ ಹಾಕುವುದರಲ್ಲಿ ಕಾಲಕಳೆಯುತ್ತಾರೆ! ಇದು ಎಷ್ಟು ಸರಿ? ಸರ್ಕಾರದ ಯಾವುದೇ ಯೋಜನೆಯ ಯಶಸ್ಸಿಗೆ ಪ್ರಜೆಗಳೇ ಕಾರಣ ಹೊರತು ಸರ್ಕಾರವಲ್ಲ!

ಪ್ರಜಾಪ್ರಭುತ್ವದಲ್ಲಿ!
ಈ My LPG.in ನ ಯಶಸ್ಸಿಗೆ ಮತ್ತು ಸರ್ಕಾರದ ಆಶೋತ್ತರಗಳಿಗೆ ನಾವು ಸ್ಪಂದಿಸುವುದು ಅಗತ್ಯವಾಗಿದೆ. ಇದೊಂದು ಏಕ ಗವಾಕ್ಷಿ ಯೋಜನೆ ದೇಶದ ಎಲ್ಲಾ LPG ಗ್ರಾಹಕರಿಗೆ. Google ನಲ್ಲಿ My LPG.in ಎಂದು ಟೈಪಿಸಿದಾಗ ಈ ಪುಟ ತೆರೆದು ಕೊಳ್ಳುತ್ತದೆ. ಅಲ್ಲಿ 3 ಕಂಪೆನಿಗಳ Logo ಇದೆ. ನೀವು ಯಾವ ಕಂಪೆನಿಯ Cylinder ಹೊಂದಿದ್ದೀರಿ ಆ ಕಂಪೆನಿಯ Logoವನ್ನು ಕ್ಲಿಕ್ಕಿಸಿ. ಕೂಡಲೇ ನಿಮ್ಮ ಕಂಪೆನಿಯ ಪುಟ ತೆರೆದು ಕೊಳ್ಳುತ್ತದೆ. ಅಲ್ಲಿ ನಿಮ್ಮ ಗ್ರಾಹಕ ಸಂಖ್ಯೆ(Customer No.) ಭರ್ತಿ ಮಾಡಿ, Location click ಮಾಡಿ ರಾಜ್ಯ ಮತ್ತು ಜಿಲ್ಲೆಯ ಮಾಹಿತಿ ನೀಡಿ. ನಿಮ್ಮ Gas Distributor ಹೆಸರು ಅಲ್ಲಿಯೇ ಕಾಣಿಸುತ್ತದೆ ಅದನ್ನು Click ಮಾಡಿ. ನಂತರ ನಿಮ್ಮ ಮಾಹಿತಿ ನೀಡಿ ನಿಮ್ಮ e-mail ID ನೀಡಿ, Password ನೀಡಿ ನೋಂದಾಯಿಸಿ ಕೊಳ್ಳಿ. ನಿಮ್ಮ e-mail ಗೆ ಲಿಂಕ್ ದೊರೆಯುತ್ತದೆ. ಆನಂತರ My LPG.inಗೆ Login ಆಗಿ ನಿಮ್ಮ ಎಲ್ಲಾ ಮಾಹಿತಿ, ಈವರೆಗಿನ ವ್ಯವಹಾರದ ಸಂಪೂರ್ಣ ವಿವರ, ಪಡೆದಿರುವ Cylinder, ಹಣ ಪಾವತಿ ಎಲ್ಲವೂ ಅಲ್ಲಿ ಇದೆ!

ದಯಮಾಡಿ ಪಾಲ್ಗೊಳ್ಳಿ ಮತ್ತು ಯೋಜನೆಯನ್ನು ಯಶಸ್ವಿಗೊಳಿಸಿ.
My LPG.in ನನ್ನ ಸ್ವಅನುಭವ: IVRS ಮೂಲಕ ಬುಕ್ ಮಾಡಿದ್ದ ಸಿಲಿಂಡರ್ ನ ಬಿಲ್ಲ್ ನವೆಂಬರ್ 4ರಂದು ಆಗಿತ್ತು! ಪೋನ್ ಮೂಲಕ ವಿಚಾರಿಸಿದಾಗ ನೋ ಸ್ಟಾಕ್ ಎನ್ನುವ ಉತ್ತರ, ಸಹಜವಾಗಿ ಸುಮ್ಮನಾದೆ! ನಂತರ ಹೊಳೆಯಿತು ಸ್ಟಾಕ್ ಇಲ್ಲದ ಸಿಲಿಂಡರ್ ಗೆ ಬಿಲ್ಲ್ ಹೇಗೆ ಆಗಲು ಸಾಧ್ಯ? ಎಂದು. ಮರುದಿವಸ ಪೋನ್ ಮಾಡಿ ಇದನ್ನು ಪ್ರಶ್ನಿಸಿದಾಗ ಪೋನ್ ಕಟ್ ಮಾಡಲಾಯಿತು ನಂತರ ಪ್ರಯತ್ನಿಸಿದಾಗ ರಿಸೀವ್ ಮಾಡಲಿಲ್ಲ. ನವೆಂಬರ್ 11 ರಂದು ಸಂಜೆ 4:40ಕ್ಕೆ My LPG.in ಮೂಲಕ ಕಂಪ್ಲೇಂಟ್ ನೊಂದಾಯಿಸಿದೆ. ಏಕೆಂದರೆ ಬಿಲ್ಲ್ ಅದಮೇಲೆ ಸ್ಟಾಕ್ ಇಲ್ಲ ಎನ್ನುವುದು ಕಾನೂನಿನ ಮಿತಿಯಲ್ಲಿ ಅಪರಾಧವಾಗುತ್ತದೆ! ಸರಿಯಾಗಿ 13ನಿಮಿಷಕ್ಕೆ ನನ್ನ ಸಮಸ್ಯಗೆ ಪರಿಹಾರ! ದೂರಿಗೆ ಕ್ರಮ ಕೈಗೊಳ್ಳುವಂತೆ ಕಂಪೆನಿಯಿಂದ Distributor ಗೆ ಆಧೇಶ! Distributor ನಿಂದ ದೂರವಾಣಿ ಕರೆ ಕ್ಷಮೆಯಾಚನೆ! ಸಂಜೆ 5:30ಕ್ಕೆ ಸಿಲಿಂಡರ್ ಮನೆ ಬಾಗಿಲಿನಲ್ಲಿ! ಹೇಗಿದೆ ವ್ಯವಸ್ಥೆ! ಇದು ಮಾನ್ಯ ಮೋದಿ ಸರ್ಕಾರದ ಕೊಡುಗೆ ನಮಗಾಗಿ ನೀವೂ ಪಾಲ್ಗೊಳ್ಳಿ. ಹೆಚ್ಚಿನ ವಿವರಗಳನ್ನು ನೀವು ಅಲ್ಲಿಯೇ ಅನುಭವಿಸಿ! ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.

ಈ LPG ಗ್ರಾಹಕರಿಗೆ ಸಂಬಂಧಿಸಿದಂತೆ ಇನ್ನೊಂದು ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ! ಇದು ಸುಮಾರು 20ವರ್ಷಗಳಿಂದ ಚಾಲ್ತಿಯಲ್ಲಿರುವ ಯೋಜನೆ. ಅದಿಕೃತ ಗ್ರಾಹಕರಾಗಿರುವ ಭಾರತೀಯ ಪ್ರಜೆಗಳೆಲ್ಲರಿಗೂ ಈ ಯೋಜನೆ ಅನ್ವಯಿಸುತ್ತದೆ. ಇದು ಪ್ರತಿ LPG ಗ್ರಾಹಕರನ್ನು ವಿಮಾ ಯೋಜನೆಯ ಫಲಾನುಭವಿಯಾಗಿಸುತ್ತದೆ ಇದು ಸರ್ಕಾರದ ಯೋಜನೆ. ಇದಕ್ಕೆ ನಾವು ಯಾವುದೇ ಹಣ ಪಾವತಿಸುವಂತಿಲ್ಲ! ಸಿಲಿಂಡರ್ ಸಾಗಾಟ ಅಥವಾ ಉಪಯೋಗಿಸುವಲ್ಲಿ ಆಗುವ ದುರ್ಘಟನೆ, ಆಕಸ್ಮಿಕ, ಅಪಘಾತಗಳಿಗೆ ಮತ್ತು ಆಸ್ತಿಪಾಸ್ತಿ ಹಾನಿಗಳಿಗೆ ಈ ವಿಮಾ ಯೋಜನೆ ಇದೆ! ಇದರ ಸಂತ್ರಸ್ತ ಪ್ರತಿ ವ್ಯಕ್ತಿಗೆ ರೂ. 10ಲಕ್ಷ ಮತ್ತು ಪ್ರತಿ ಘಟನೆಗೆ (ನಷ್ಟ ತೀವ್ರತೆ ಅವಲಂಭಿಸಿ) ರೂ. 50ಲಕ್ಷ ವಿಮೆ ದೊರೆಯುತ್ತದೆ. ಇದಕ್ಕಾಗಿ ಗ್ರಾಹಕನು KYC ಅರ್ಜಿಯನ್ನು ಭರ್ತಿಮಾಡಿ ಸಲ್ಲಿಸಿರ ಬೇಕು ಇದೊಂದೆ ಅರ್ಹತಾ ನಿಯಮ!
ಮೊದಲು, ಈಗ My LPG.in ನಲ್ಲಿ ನೊಂದಾಯಿಸಿ.

Regulator ನ ವಿಷಯ: ಇದನ್ನು ಯಾವುದೇ Distributor ಯಾವುದೇ ಸಂದರ್ಭದಲ್ಲಿಯೂ ಯಾವುದೇ ಗ್ರಾಹಕನಿಗೆ ಮಾರುವಂತಿಲ್ಲ! ಅದು ಕಂಪೆನಿಯ ಸ್ವತ್ತು ಮತ್ತು ನಿಯಮಾನುಸಾರ ಕಂಪೆನಿಯು ಅದಕ್ಕೆ ಗ್ರಾಹಕನಿಂದ ಡೆಪೋಸಿಟ್ ಪಡೆದಿರುತ್ತದೆ. ಹಾಗಾಗಿ ಯಾವುದೇ ಸಂದರ್ಭದಲ್ಲಿ Regulator ದೋಷಪೂರಿತವಾಗಿದ್ದರೆ, ಹಾಳದರೆ ಅದನ್ನು Distributor ಗೆ ಹಿಂದಿರುಗಿಸಿ ಮತ್ತು ಯಾವುದೇ ಹಣ ನೀಡದೆ ಹೊಸದನ್ನು Distributor ನಿಂದ ಪಡೆಯಿರಿ ಇದು ಪ್ರತಿ ಗ್ರಾಹಕನ ಹಕ್ಕು! ಈ ವಿಷಯಗಳನ್ನು ಕಂಪೆನಿಯಾಗಲೀ Distributor ಆಗಲೀ ಗ್ರಾಹಕನಿಗೆ ತಿಳಿಸುವುದೇ ಇಲ್ಲ!