ಚಿತ್ರದುರ್ಗ: ವಿಧಾನಸಭೆ ಚುನಾವಣೆ ನಿಮಿತ್ತ ಮತದಾರರಿಗೆ ಅಲ್ಲಲ್ಲಿ ಚಿಕನ್ ಬಿರಿಯಾನಿ ಪಾರ್ಟಿಗಳು ನಡೆದ ಕಾರಣಕ್ಕೋ ಏನೋ ಬಾಯ್ಲರ್ ಚಿಕನ್ ಬೆಲೆ ದಿಡೀರನೆ ಏರಿಕೆಯಾಗಿ ಮಾಂಸಹಾರಿಗಳಿಗೆ ಶಾಖ್ ನೀಡಿದೆ.
ಕಳದೆ ತಿಂಗಳು ಒಂದು ಕೆ.ಜಿ.ಬಾಯ್ಲರ್ ಚಿಕನ್ 120 ರಿಂದ 130 ರೂ.ಗಳಿಗೆ ಮಾರಾಟವಾಗುತ್ತಿತ್ತು. ವಿಧಾನಸಭೆ ಚುನಾವಣೆ ಸಮೀಸುತ್ತಿದ್ದಂತೆ ಒಂದು ಕೆ.ಜಿ.ಬಾಯ್ಲರ್ ಚಿಕನ್ 170 ರೂ.ಗಳಿಗೆ ಮಾರಾಟವಾಗುತ್ತಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಾಯ್ಲರ್ ಚಿಕನ್ ಬೆಲೆ ಇಳಿಕೆಯಾಗುತ್ತಿತ್ತು. ಆದರೆ ಈ ಬಾರಿ ಚುನಾವಣೆ ಎಫೆಕ್ಟ್ ಬಾಯ್ಲರ್ ಕೋಳಿಗಳಿಗೂ ತಟ್ಟಿರುವುದರಿಂದ ಚಿಕನ್‍ಪ್ರಿಯರು ಚಿಕನ್ ಕೊಂಡುಕೊಳ್ಳಲು ಮೀನಾಮೇಷ ಎಣಿಸುವಂತಾಗಿದೆ.