ಬೆಂಗಳೂರು: ಬಸವಕಲ್ಯಾಣ ಉಪಚುನಾವಣೆಯಲ್ಲಿ ಗೆಲ್ಲದಿದ್ದರೆ ಬಿಜೆಪಿ ಬಿದ್ದು ಹೋಗುವುದಿಲ್ಲ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಜನರು ಬಿಜೆಪಿ ಗೆಲ್ಲಿಸುತ್ತಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಲೈಕೆಗಾಗಿ ವಿವಿಧ ಸಮುದಾಯಗಳ ಪ್ರಾಧಿಕಾರ ಘೋಷಣೆ ಮಾಡಿಲ್ಲ.ಆಯಾ ಸಮುದಾಯಗಳ ಬೇಡಿಕೆಗೆ ಅನುಗುಣವಾಗಿ ಪ್ರಾಧಿಕಾರ ರಚಿಸುತ್ತಾ ಬಂದಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರದಿಂದ ಮರಾಠವನ್ನು ಉದ್ಧಾರ ಮಾಡೋದಲ್ಲ ಎಂದರು.