ಚಿತ್ರದುರ್ಗ: ಮನುಷ್ಯ ಸದೃಢರಾಗಬೇಕಾದರೆ ದೈಹಿಕ ಶ್ರಮ ಅಗತ್ಯವಾಗಿದ್ದು, ಇದೇ ರೀತಿ ಉತ್ತಮವಾದ ರಸ್ತೆಗಳಿದ್ದರೆ ಸಂಚಾರ ವ್ಯವಸ್ಥೆ ಸುಗಮವಾಗಲಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಶಾಸಕರ ಅನುದಾನದಡಿ ಜೈ ಮಾರುತಿ ಯುವಕರ ಬಳಗದವರಿಗೆ ಶಾಸಕರ ಅನುದಾನದಡಿ ರೂ.೫.೦೦ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಮಲ್ಟಿಜಿಮ್ ಮತ್ತು ಅಲೆಮಾರಿ ಯೋಜನೆಯಡಿ ಸದರಿ ಗ್ರಾಮದಲ್ಲಿ ದೊಂಬಿದಾಸರ ಕಾಲೋನಿಯಲ್ಲಿ ರೂ.೧೦.೦೦ಲಕ್ಷಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಸಿ.ಸಿ. ರಸ್ತೆ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಇಂದಿನ ಯುವ ಜನತೆ ದಿಶ್ಚಟಗಳಿಂದ ದೂರ ಇರಬೇಕಾದರೆ ಈ ರೀತಿಯಾದ ಉತ್ತಮವಾದ ಹವ್ಯಾಸಗಳನ್ನು ಬೆಳಸಿಕೊಳ್ಳುವುದರ ಮೂಲಕ ತಮ್ಮ ಆರೋಗ್ಯ ಸಂಪತ್ತನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕಿದೆ ಮುಂದಿನ ಪ್ರಜೆಗಳಾದ ನೀವುಗಳು ಆರೋಗ್ಯವಾಗಿದ್ದರೆ ದೇಶವನ್ನು ಪ್ರಗತಿಯತ್ತ ಕೊಂಡ್ಯೂಯಬಹುದಾಗಿದೆ ನಮ್ಮ ಕಾಲದಲ್ಲಿ ಈ ರೀತಿಯಾದ ಸೌಲಭ್ಯಗಳಿಲ್ಲದೆ ಕಲ್ಲುಗಳನ್ನು ಎತ್ತುವುದರ ಮೂಲಕ ಕಸರತ್ತ ಮಾಡಲಾಗುತಿತ್ತು ಆದರೆ ಈಗ ಸರ್ಕಾರ ಯುವಜನತೆ ಉತ್ತಮವಾದ ಆರೋಗ್ಯವನ್ನು ಹೊಂದಲಿ ಎಂಬ ದೃಷ್ಟಿಯಿಂದ ಈ ರೀತಿಯಾದ ಸೌಲಭ್ಯವನ್ನು ನೀಡುತ್ತಿದೆ ಇಉದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ಈಗಾಗಲೇ ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧೆಡೆಗಳಲ್ಲಿ ಈ ರೀತಿಯಾದ ಮಲ್ಟಿಜಿಮ್‌ಗಳನ್ನು ನೀಡಲಾಗಿದೆ, ನಾನು ಸಹಾ ಕ್ರೀಡಾಪಟು ಆಗಿರುವುದರಿಂದ ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗಿದೆ, ಯುವಜನತೆ ದುಶ್ಚಟಗಳಿಂದ ದೂರ ಇದ್ದು ಆರೋಗ್ಯ ಸಂಪತ್ತನ್ನು ಕಾಪಾಡಿಕೊಳ್ಳಿ ಎಂದ ಶಾಸಕರು, ಸರ್ಕಾರ ಉತ್ತಮವಾದ ರಸ್ತೆಗಳ ನಿರ್ಮಾಣಕ್ಕೂ ಸಹಾ ಆದ್ಯತೆ ನೀಡುತ್ತಿದೆ ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಇರುವ ಕೇರಿಗಳಲ್ಲಿ ಉತ್ತಮವಾದ ರಸ್ತೆಗಳನ್ನು ನಿರ್ಮಾಣ ಮಾಡಲು ಸಾಕಷ್ಟು ಹಣವನ್ನು ನೀಡಿದೆ ಇದು ಸಹಾ ಉತ್ತಮ ರೀತಿಯಲ್ಲಿ ಕಾಮಗಾರಿ ಆಗಿ ಅದು ಬಹು ದಿನ ಬಾಳಿಕೆ ಬರುವಂತೆ ಮಾಡಬೇಕಿದೆ ಜನತೆಯೂ ಸಹಾ ರಸ್ತೆಗಳನ್ನು ಅಗಿಯದೆ ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ ಇದರಿಂದ ಹಲವಾರು ವರ್ಷ ಬಾಳಿಕೆ ಬರುತ್ತದೆ ಎಂದು ಜನತೆಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯರಾದ Pರಿಯಣ್ಣ, ಮಾಜಿ ಗ್ರಾ.ಪಂ ಅಧ್ಯಕ್ಷರಾದ ಮಂಜುನಾಥ್, ಗ್ರಾ.ಪಂ ಸದಸ್ಯರುಗಳಾದ ಜಗದೀಶ್, ಪಾಲಯ್ಯ, ಯರ್ರಿಸ್ವಾಮಿ, ರಮೇಶ್, ಬಲಿಜ ಸಂಘದ ಅಧ್ಯಕ್ಷರಾದ ಗೋವರ್ಧನ್, ಜೈ ಮಾರುತಿ ಯುವಕ ಬಳಗದ ಸೋಮಶೇಖರ್, ಧನ0ಜಯ, ಮುರಳೀಧರ, ಹರೀಶ್ ಸೇರಿದಂತೆ ಗ್ರಾಮದ ಮುಖಂಡರುಗಳು ಹಾಜರಿದ್ದರು.