ಬೆಂಗಳೂರು: ರಾಜ್ಯದ ಆರು ಸಾವಿರ ಗ್ರಾಮಗಳು ಹಾಗೂ 200ಕ್ಕೂ ಹೆಚ್ಚು ಪಟ್ಟಣಗಳಲ್ಲಿ ಶವ ಸಂಸ್ಕಾರ ಮಾಡಲು ಸ್ಮಶಾನವೇ ಇಲ್ಲ ಎಂದು ನಿನ್ನೆ ರಾಜ್ಯ ಸರ್ಕಾರ ಉಚ್ಛ ನ್ಯಾಯಾಲಯಕ್ಕೆ ವರದಿಯೊಂದನ್ನು ನೀಡಿದೆ. 

ಸ್ಮಶಾನವಿಲ್ಲದ ಗ್ರಾಮಗಳಿಗೆ ಅಗತ್ಯ ಜಮೀನು ಒದಗಿಸಬೇಕೆಂದು ವ್ಯಕ್ತಿಯೊಬ್ಬರು ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸುತ್ತಾ ಸರ್ಕಾರ ಈ ವರದಿ ನೀಡಿದ್ದು ಈ ಸಮಸ್ಯೆ ನಿವಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದೆ.