ಬೆಂಗಳೂರು: ಇನ್ನುಮುಂದೆ ಬಿ.ಇಡಿ ಕೋರ್ಸ್ 4 ವರ್ಷ ಹೇಗೆ ಅಂತೀರ ಹಾಗಾದರೆ ಓದಿ.

ಪಿಯುಸಿಯಿಂದಲೇ ಬಿ.ಇಡಿ ತರಬೇತಿಗೆ ಪ್ರವೇಶ ಪಡೆಯಬಹುದಾಗಿದೆ. ಈಗ ಜಾರಿಯಲ್ಲಿರುವ ಎರಡು ವರ್ಷಗಳ ಬಿ.ಇಡಿ ಕೋರ್ಸ್ ಇನ್ನುಮುಂದೆ ನಾಲ್ಕು ವರ್ಷಗಳಿಗೆ ವಿಸ್ತರಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸಮ್ಮತಿ ಸೂಚಿಸಿದೆ. 2019ರಿಂದಲೇ ಕೋರ್ಸ್ ಜಾರಿಗೆ ಬರುವ ಸಾಧ್ಯತೆ ಇದೆ.

ಕೆಲವೇ ವಾರಗಳಲ್ಲಿ ಇದಕ್ಕೆ ಕಾನೂನು ಸಚಿವಾಲಯ ತನ್ನ ಪ್ರತಿಕ್ರಿಯೆ ಏನು ಎನ್ನುವುದನ್ನು ತಿಳಿಸಲಿದೆ. ಕಾನೂನು ಸಚಿವಾಲಯ ಸಮ್ಮತಿ ಸೂಚಿಸಿದರೆ 2019ರಿಂದಲೇ ನಾಲ್ಕು ವರ್ಷಗಳ ಬಿ.ಇಡಿ ಕೋರ್ಸ್ ಆರಂಭವಾಗುತ್ತದೆ ಎಂಬುದು ಸುದ್ದಿ.