ಚಿತ್ರದುರ್ಗಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೇವರಮರಿಕುಂಟೆಯಲ್ಲಿ ಜುಲೈ 10 ರಂದು 33.3 ಮಿ.ಮೀ. ಮಳೆಯಾಗಿದೆ ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.

ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 30.2 ಮಿ.ಮೀ., ಪರುಶುರಾಂಪುರ 19.4, ತಳಕು 8.4, ನಾಯಕನಹಟ್ಟಿ 4.6. ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 3, ಬಬ್ಬೂರು 4, ಸೂಗೂರು 30.4, ಈಶ್ವರಗೆರೆ 2.2. ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ (1)-16, ಚಿತ್ರದುರ್ಗ (2)-18.7, ಹಿರೇಗುಂಟನೂರು 04, ಭರಮಸಾಗರ 6.2, ತುರುವನೂರು 22.8, ಸಿರಿಗೆರೆ 24.4, ಐನಹಳ್ಳಿ 27.4. ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೆಚ್.ಡಿ ಪುರ 02. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 10.8, ಮತ್ತೋಡು 16.2 ಹಾಗೂ ಮಾಡದಕೆರೆಯಲ್ಲಿ 12.2 ಮಿ.ಮೀ ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.