ಚಿತ್ರದುಗ: ಇಂದಿನಿಂದ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ನಗರಸಭೆ, ಚಳ್ಳಕೆರೆ ನಗರಸಭೆ ಹಾಗೂ ಹೊಸದುರ್ಗ ಪುರಸಭೆಗೆ ಚುನಾವಣೆಗೆ ನಾಮ ಪತ್ರಸಲ್ಲಿಕೆ ಪ್ರಾರಂಭವಾಗಲಿದೆ

ಚಿತ್ರದುರ್ಗ ನಗರಸಭೆಯ 35, ಚಳ್ಳಕೆರೆ ನಗರಸಭೆ 31 ಹಾಗೂ ಹೊಸದುರ್ಗ ಪುರಸಭೆಯ 23 ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದೆ. ಚುನಾವಣಾ ವೇಳಾಪಟ್ಟಿಯಂತೆ ಆಗಸ್ಟ್ 10 ರಿಂದ ಆ.17 ರ ವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ರಜಾ ದಿನಗಳನ್ನು ಹೊರತುಪಡಿಸಿ ನಾಮಪತ್ರ ಸಲ್ಲಿಸಬಹುದಾಗಿದೆ. ಆ.18 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಆ.20 ಕೊನೆಯ ದಿನವಾಗಿರುತ್ತದೆ. ಆ.29 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಸೆಪ್ಟೆಂಬರ್ 3 ರಂದು ಬೆಳಗ್ಗೆ 8 ರಿಂದ ಆಯಾ ತಾಲ್ಲೂಕು ಕೇಂದ್ರಸ್ಥಾನದಲ್ಲಿ ಮತ ಎಣಿಕೆ ನಡೆಯಲಿದೆ.

ಠೇವಣಿ; ನಗರಸಭೆಗೆ ನಾಮಪತ್ರ ಸಲ್ಲಿಸುವವರು ಸಾಮಾನ್ಯ 2 ಸಾವಿರ ಹಾಗೂ ಪರಿಶಿಷ್ಟ ಜಾತಿ, ಪ.ಪಂಗಡ, ಹಿಂದುಳಿದ ವರ್ಗದವರು ಹಾಗೂ ಮಹಿಳೆಯರು 1 ಸಾವಿರ ಠೇವಣಿ ಸಲ್ಲಿಸಬೇಕು. ಪುರಸಭೆಗೆ ಸಾಮಾನ್ಯ 1 ಸಾವಿರ ಹಾಗೂ ಮಹಿಳೆ, ಎಸ್.ಸಿ, ಎಸ್.ಟಿ ಹಾಗೂ ಬಿ.ಸಿ.ಎಂ. ಅಭ್ಯರ್ಥಿಗಳು ರೂ.500 ಠೇವಣಿಯನ್ನಾಗಿ ಸಲ್ಲಿಸಬೇಕು.