ದಾವಣಗೆರೆ: ಮೊದಲು ತರಳಬಾಳು ಹುಣ್ಣಿಮೆ ಸಿರಿಗೆರೆಯಲ್ಲಿ ನಡೆಯುತ್ತಿತ್ತು. ಮೊದಲಬಾರಿಗೆ ಬೇರೆ ಬೇರೆ ಕಡೆ ಹುಣ್ಣಿಮೆಯನ್ನು ಆಚರಿಸಲು ನಿರ್ಧರಿಸಲಾಯಿತು. ಆಗ ಜಗಳೂರಿನಲ್ಲಿ ಪ್ರಥಮವಾಗಿ ನಡೆ ತರಳಬಾಳು ಹುಣ್ಣಿಮೆ  1950 ರಲ್ಲಿ ನಡೆದಿದ್ದ ಹುಣ್ಣಿಮೆ ನಂತರ 1993 ರಲ್ಲಿ ನಡೆದಿತ್ತು. ಈಗ ಮತ್ತೆ ಜಗಳೂರು ನಡೆಯುತ್ತಿರುವುದು ವಿಶೇಷ.

 ಜಗಳೂರು ಪಟ್ಟಣ ಸಿರಿಗೆರೆಯ ತರಳಬಾಳು ಬೃಹನ್ಮಠದಿಂದ ನಡೆಯುವ ‘ತರಳಬಾಳು ಹುಣ್ಣಿಮೆ ಮಹೋತ್ಸವ’ಕ್ಕೆ ಸಜ್ಜಾಗಿದೆ. ಎರಡು ವರ್ಷಗಳ ವಿರಾಮದ ನಂತರ ನಡೆಯುತ್ತಿರುವ 9 ದಿನಗಳ ಆಧ್ಯಾತ್ಮಿಕ–ಸಾಂಸ್ಕೃತಿಕ ಉತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಲಿದೆ.

ಇಲ್ಲಿನ ದಾವಣಗೆರೆ ರಸ್ತೆಯ ನ್ಯಾಯಾಲಯದ ಸಂಕೀರ್ಣದ ಎದುರು, ಸುಮಾರು 20 ಎಕರೆ ಪ್ರದೇಶದಲ್ಲಿ ವಿಶಾಲ ಹಾಗೂ ಸುಂದರವಾದ ವೇದಿಕೆ ಮತ್ತು ತರಳಬಾಳು ಮಠದ ಭವ್ಯತೆಯನ್ನು ಸಾರುವ ಶ್ವೇತ ಮಂಟಪ ತಲೆ ಎತ್ತಿದೆ.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಮಂಗಳವಾರ ಸಂಜೆ ನಡೆಯುವ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದಾರೆ.

ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಉತ್ಸವ ಜರುಗಲಿದೆ. ಜ. 31ರಂದು ಮಧ್ಯಾಹ್ನ 2.30ರಿಂದ 5.30ರ ವರೆಗೆ ಉತ್ಸವ ನಡೆಯಲಿದೆ.