ಚಿತ್ರದುರ್ಗ: ಸಾಮನ್ಯ ಕೆಮ್ಮು ನೆಗಡಿ ಜ್ವರದಿಂದ ಬಳಲುತ್ತೀದ್ದೀರಾ ಹಾಗೇ ಆಸ್ಪತ್ರೆಗೆ ತೆರಳು ಸಾಧ್ಯವಾಗುತ್ತಿಲ್ಲವೇ ಚಿಂತಿಸದಿರಿ ಮೊಬೈಲ್ ನಲ್ಲಿಯೇ ವೈದರು ನಿಮಗೆ ಚಿಕಿತ್ಸೆ ನೀಡುತ್ತಾರೆ. ವೈದ್ಯರನ್ನು ಮೊಬೈಲ್‍ನಲ್ಲಿ ಸಂಪರ್ಕಿಸಲು ನೀವು ಮಾಡಬೇಕಿರುವುದು ಇಷ್ಟೇ- ನಿಮ್ಮ ಮೊಬೈಲ್‍ನಲ್ಲಿನ ಗೂಗಲ್‍ನಲ್ಲಿ ಇ ಸಂಜಿವೀನಿ ಒಪಿಡಿ ಎಂದು ನಮೂದಿಸಿ. ರಿಜಿಸ್ಟರ್ ಆಗಬೇಕು. ವೆಬ್ ವಿಡಿಯೋ ಮೂಲಕ ಸಂಪರ್ಕಕಕ್ಕೆ ಬರುವ ವೈದ್ಯರು ನಿಮ್ಮ ಕಾಯಿಲೆ ಕುರಿತು ವಿವರವಾಗಿ ವಿಚಾರಣೆ ನಡೆಸಿ, ಕಾಯಿಲೆಗೆ ಚಿಕಿತ್ಸೆ ಬರೆದುಕೊಳ್ಳಲಿದ್ದಾರೆ. ಆ ಮೂಲಕ ಆಸ್ಪತ್ರೆಯ ಕದ ತಟ್ಟದೇ ಇರುವಲ್ಲಿಯೇ ರೋಗಕ್ಕೆ  ಚಿಕಿತ್ಸೆ ಪಡೆಯಬಹುದಾಗಿದೆ.

ಲಿಂಕ್ ಬಳಸಿ ಸದ್ಬಳಕೆ ಮಾಡಿ: ಇ ಸಂಜೀವಿನಿ ಲೀಂಕ್ ಅನ್ನು ದೇಶಾದ್ಯಂತ  ಕೇಂದ್ರ ಆರೋಗ್ಯ ಇಲಾಖೆ ಲೋಕಾರ್ಪಣೆ ಮಾಡಿದೆ.

ಇ ಸಂಜೀವಿನಿ ಬಳಕೆ ಕುರಿತು ಜನತೆಗೆ ಅರಿವಿನ ಕೊರತೆ ಇದೆ. ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ತೆರಳುವ ಬದಲು, ಲಿಂಕ್ ಮುಖಾಂತರವೇ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗಲಿದೆ.

ಏನಿದು ಇ ಸಂಜೀವಿನಿ: ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಲು ಕೇಂದ್ರ ಆರೋಗ್ಯ ಮಂತ್ರಾಲಯ, ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ ( ನ್ಯಾಷನಲ್ ಟಿಲಿ ಕನ್ಸಲ್ ಟೇಷನ್ ಸರ್ವಿಸ್ ) ಎಂಬ ಹೆಸರಿನಲ್ಲಿ ಇ ಸಂಜೀವನಿ ಆ್ಯಪ್ ಸಿದ್ದಪಡಿಸಿದೆ.

ಟೆಲಿ ಸಮಾಲೋಚನಾ ಸೇವೆ ಪಡೆಯಲು, ಮೊಬೈಲ್ ಅಥವಾ ಕಂಪ್ಯೂಟರ್‍ನ ಗೂಗಲ್‍ನಲ್ಲಿ ಇ ಸಂಜೀವಿನಿ ಎಂಬುದಾಗಿ ನಮೂದಿಸಿ. ನಿಮಗೊಂದು ಕೇಂದ್ರ ಆರೋಗ್ಯ ಸಚಿವಾಲಯದ ಮುಖ ಪುಟ ತೆರೆದುಕೊಳ್ಳಲಿದೆ. ಇದರಲ್ಲಿ ಪೇಷಂಟ್ ರಿಜಿಸ್ಟ್ರೇಷನ್‍ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿದರೆ ನಿಮಗೊಂದು ಒಟಿಪಿ ಬರಲಿದೆ ಆ ಒಟಿಪಿ ನಂಬರ್ ಬರೆದರೆ ರಿಜಿಸ್ಟ್ರೇಷನ್ ಆಪ್ಲಿಕೇಷನ್ ತೆರೆದುಕೊಳ್ಳುತ್ತದೆ.

ವಿಡಿಯೋ ಕಾಲ್‍ನಲ್ಲಿ ಸಂಪರ್ಕ ಆದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ನಂಬರ್, ವಿಳಾಸವನ್ನು ನಮೂದಿಸಿ ಲಾಗಿನ್ ಆಗಬೇಕು. ಈ ಸಂದರ್ಭದಲ್ಲಿ ನಿಮಗೊಂದು ಟೋಕನ್ ನಂಬರ್ ಬರಲಿದೆ. ಆ ನಂಬರ್ ನೀಡಿ ವೈದ್ಯರನ್ನು ವಿಡಿಯೋಕಾಲ್ ಮೂಲಕ ಸಂಪರ್ಕಿಸಬಹುದು. ಈ ಸೇವೆಯೂ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೂ ಲಭ್ಯವಿರುತ್ತದೆ. ಒಮ್ಮೆ ರಿಜಿಸ್ಟರ್ ಆದರೆ, ಮತ್ತೆ ಆಗುವ ಅಗತ್ಯವಿಲ್ಲ. ವಿಡಿಯೋ ಕಾಲ್ ಮೂಲಕವೇ ವೈದ್ಯರು ರೋಗಿಗಳಿಗೆ ಚಿಕಿತ್ಸೆಗೆ ಔಷಧ ಬರೆದುಕೊಡಲಿದ್ದಾರೆ.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಹಬ್ ಸೆಂಟರ್‍ನಲ್ಲಿ ಇ ಸಂಜೀವಿನಿ ಕಾರ್ಯ ನಿರ್ವಹಿಸುತ್ತಿದ್ದು, ಕುಳಿತ ಸ್ಥಳದಿಂದಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಲು www.esanjeevaniopd.in    ಲಾಗಿನ್ ವೆಬ್ ಪೇಜ್‍ನಲ್ಲಿ ಲಾಗಿನ್ ಆಗುವ ಮೂಲಕ ಮನೆಯಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ. ಇ ಆಸ್ಪತ್ರೆಗೆ ಜಿಲ್ಲಾ ನೋಡಲ್ ಅಧಿಕಾರಿಯಾಗಿ ಡಾ.ಚಂದ್ರಶೇಖರ್ ಇವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ ತಿಳಿಸಿದ್ದಾರೆ.