ಚಿತ್ರದುರ್ಗ: ಚಿತ್ರದುರ್ಗ ನಗರದ ವಾಸವಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ, ವಲ್ಲಭ ಬಾಯಿ ಪಟೇಲರ ಜನ್ಮದಿನೋತ್ಸವದ ಅಂಗವಾಗಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕಾದಂಬರಿಕಾರ, ಕಥೆಗಾರ, ಚಲನಚಿತ್ರ ಸಂಭಾಷಣೆಕಾರ ಬಿ.ಎಲ್ ವೇಣು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಆರ್ಯವೈಶ್ಯ ನೌಕರರ ಹಾಗೂ ವೃತ್ತಿನಿರತರ ಸಂಘ(ಆವೋಪ)ವುಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ವೇಣು ಅವರು ತಮ್ಮ ಬರೆಹದ ಸಂದರ್ಭದ ಸ್ವಾರಸ್ಯಗಳನ್ನು ಹಂಚಿಕೊಂಡರುಯ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ ಅರುಣ್ ಅವರು ರಸ್ತೆ ಸುರಕ್ಷತೆ, ಕಾನೂನು ಮತ್ತು ಶಿಸ್ತು ಪಲನೆಯ ಸಂಬಂಧಿ ಸಂವಾದ ನಡೆಸಿದರು. ಎಸ್.ಎನ್ ಕಾಶಿ ವಿಶ್ವನಾಥ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಆವೋಪ ಅಧ್ಯಕ್ಷ ಪಿ.ಎನ್ ಮೋಹನಕುಮಾರ ಗುಪ್ತ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಪಿ.ಎಲ್ ಸುರೇಶರಾಜು, ಪಿ.ಎಸ್ ನಾಗರಾಜ ಶೆಟ್ಟಿ, ಸುಜಾತಾ ಪ್ರಾಣೇಶ್, ಸುಧಾ ನಾಗರಾಜ್, ರಾಮಲಿಂಗಶೆಟ್ಟಿ, ಗೋಪಾಲಕೃಷ್ಣ ಇದ್ದರು.