ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೆ ತರುವುದಕ್ಕೆ ‘ದೋಸ್ತಿ ಸರಕಾರ ನಿರ್ಧಾರ ‘ ಮಾಡಿದೆ ಎನ್ನಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆ ಮುಗಿದ ನಂತರ ಮಾಧ್ಯಮಗಳಿಗೆ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ವಿವಿಧ ಮಹನೀಯರ ಹೆಸರಿನಲ್ಲಿ ರಜೆ ನೀಡುವ ಪದ್ಧತಿ ರದ್ದು ಮಾಡಿ, ನೌಕರರ ಸಿಎಲ್‌ಗಳ ಸಂಖ್ಯೆಯನ್ನು 8ಕ್ಕೆ ಇಳಿಕೆ ಮಾಡಿದೆ ಎನ್ನಲಾಗಿದೆ. ಇದಲ್ಲದೇ ಬುದ್ಧ, ಬಸವ, ಗಾಂ, ಅಂಬೇಡ್ಕರ್, ಕನಕ, ವಾಲ್ಮೀಕಿ ಹೀಗೆ ವಿವಿಧ ಜಯಂತಿಗಳಿಗೆ ಸರ್ಕಾರದ ರಜೆ ಇರುತ್ತದೆ. ಕೆಲವು ಜಯಂತಿಗಳಿಗೆ ನಿರ್ಬಂತ ರಜೆ ಇದೆ.

ಎಲ್ಲ ಜಯಂತಿಗಳಿಗೂ ರಜೆಯನ್ನು ರದ್ದು ಮಾಡಿ ಅದನ್ನು ನಿರ್ಬಂತ ರಜೆಯನ್ನಾಗಿ ಪರಿವರ್ತಿಸುವಂತೆ ಶಿಫಾರಸು ಮಾಡಲಾಗಿದೆ.ನೌಕರರ ಹಕ್ಕಿನ 15 ಸಿಎಲ್‌ಗಳ ಸಂಖ್ಯೆಯನ್ನು 8ಕ್ಕೆ ಇಳಿಸುವಂತೆಯೂ ಶಿಫಾರಸು ಮಾಡಿದೆ.