ಚಿತ್ರದುರ್ಗ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ (ಎಬಿಎಆರ್‍ಕೆ ಆರೋಗ್ಯ ಕಾರ್ಡ್) ಗಳನ್ನು ಇನ್ನು ಮುಂದೆ ಎಲ್ಲ ಸೇವಾ ಸಿಂಧು ಕೇಂದ್ರಗಳಲ್ಲಿಯೂ ಪಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ.

ಈ ಮೊದಲು ಎಬಿಎಆರ್‍ಕೆ ಆರೋಗ್ಯ ಕಾರ್ಡ್‍ಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆಯಲು ಅವಕಾಶವಿತ್ತು.  ಇದೀಗ ಜಿಲ್ಲೆಯ ಎಲ್ಲ ಸೇವಾಸಿಂಧು ಕೇಂದ್ರಗಳಲ್ಲಿಯೂ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಒಟ್ಟು 437 ಸೇವಾಸಿಂಧು ಕೇಂದ್ರಗಳಿದ್ದು, ಚಳ್ಳಕೆರೆ-106, ಚಿತ್ರದುರ್ಗ-104, ಹಿರಿಯೂರು-77, ಹೊಳಲ್ಕೆರೆ-41, ಹೊಸದುರ್ಗ-66 ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 43 ಸೇವಾಸಿಂಧು ಕೇಂದ್ರಗಳಿವೆ.

ಎಬಿಎಆರ್‍ಕೆ ಕಾರ್ಡ್‍ಗಳನ್ನು ಸೇವಾಸಿಂಧು ಕೇಂದ್ರಗಳಲ್ಲಿ ಎ4 ಪೇಪರ್‍ನಲ್ಲಿ ಪಡೆಯಲು ರೂ. 10, ಪಿವಿಸಿ ಕಾರ್ಡ್ ಆದಲ್ಲಿ ರೂ. 35 ಪಾವತಿಸಿ ಪಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ತಿಳಿಸಿದ್ದಾರೆ.