ಮೈಸೂರು: ಇದೇನಪ್ಪ ಆನೆ ಲದ್ದಿಯಿಂದ ಅಂಚೆಲಕೋಟೆ ಬರಲು ಸಾಧ್ಯನಾ ಅಂತ ಹುಬ್ಬೇರಿಸುವ ಅಗತ್ಯವಿಲ್ಲ. ಸುಮ್ಮನೆ ಈ ಸುದ್ದಿ ಓದಿ ಬಿಡಿ.!

ಇಂದು ವಿಶ್ವ ಆನೆ ದಿನಾಚರಣೆ. ಆನೆ ಲದ್ದಿಯಿಂದ ತಯಾರಿಸಿರುವ ವಿಶೇಷ ಲಕೋಟೆಯನ್ನು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು  ಬಿಡುಗಡೆಮಾಡಿದರು. ಮೈಸೂರಿನ ವಿಮಾನ ನಿಲ್ದಾಣದಲ್ಲಿ  ಆನೆ ಲದ್ದಿಯಿಂದ ತಯಾರಿಸಿರುವ ವಿಶೇಷ ಲಕೋಟೆಯನ್ನು ಬಿಡುಗಡೆಮಾಡಿದ ನಂತರ  ಹಿರಿಯ ಅಂಚೆ ಅಧಿಕಾರಿ ಸಂದೇಶ್ ಮಹದೇವಯ್ಯ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ವರ್ಷ ಬಂಡೀಪುರ ಹುಲಿಯ ಚಿಹ್ನೆ ಬಳಸಿ ಲಕೋಟೆಯನ್ನು ಬಿಡುಗಡೆಗೊಳಿಸಲಾಗಿತ್ತು ಅದರಂತೆ ಈ ಬಾರಿ ಆನೆ ಲದ್ದಿಯಿಂದ ತಯಾರಿಸಿದ ಲಕೋಟೆ ಬಿಡುಗಡೆಮಾಡಲಾಗಿದೆ ಎಂದರು.

ಈ ವರ್ಷ ಆನೆ ಲದ್ದಿಯಿಂದಲೇ ತಯಾರಿಸಿದ ಲಕೋಟೆ ವಿಶೇಷವೇನೆಂದರೆ ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ತಪ್ಪಲಿ ಮತ್ತು ಪ್ರಾಣಿಗಳ ಸಂತತಿ ಹೆಚ್ಚಾಗಿ ಕಾಡು ಉಳಿಯಲಿ ಎಂಬ ಉದ್ದೇಶ ಹಾಗಾಗಿ ಆನೆ ಹಾಕುವ ಲದ್ದಿಯಿಂದ ವಿಶೇಷ ಅಂಚೆ ಲಕೋಟೆ ತಯಾರಿಸಲಾಗಿದೆ ಎಂದರು.