ಚಿತ್ರದುರ್ಗ: ನಗರದ ಆರ್ಯವೈಶ್ಯ ಸಂಘ ಮತ್ತು ವಿವಿಧ ವಾಸವಿ ಸಹಸಂಸ್ಥೆಗಳ ಸಹಯೋಗದಲ್ಲಿ ಆತ್ಮೂರಿ ಲಕ್ಷ್ಮೀ ನರಸಿಂಹ ಸೋಮಯಾಜಿಗಳ ೧೭೩ ನೆಯ ಜಯಂತಿಯನ್ನು ಆಚರಿಸಲಾಯಿತು.

ವಾಸವಿ ದೇವಾಲಯದಿಂದ ವಾಸವಿ ಶಾಲೆಯ ವರೆಗೆ ಮೆರವಣಿಗೆ ನಡೆಸಲಾಯಿತು. ಪುಟಾಣಿಗಳೀಗೆ ಮೂರುಗಾಲಿ ಸೈಕಲ್ ಸ್ಪರ್ಧೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ವಾಸವಿ ಶಾಲೆಯಲ್ಲಿ ನಡೆದ ಸಭೆಯಲ್ಲಿ ಲಕ್ಷ್ಮೀ ನರಸಿಂಹ ಸೋಮಯಾಜಿಗಳವರು ವೈಶ್ಯ ಜನಾಂಗಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಯಿತು.