ಬೆಂಗಳೂರು: ಆಡಿಯೋ ಹೈಪಿಚ್  ರಾಜ್ಯ ರಾಜಕೀಯದಲ್ಲಿ ಹೊಸ ಗಲಾಟೆಗೆ ಕಾರಣವಾಗಿದೆ. ಆಪರೇಷನ್‌ ಆಡಿಯೋ ಧ್ವನಿ ಶನಿವಾರ ಮತ್ತಷ್ಟು ಜೋರಾಗಿದ್ದು, ಲೋಕಸಭೆ ಮತ್ತು ವಿಧಾನಸಭೆ ತನಕ ಇದನ್ನು ಒಯ್ಯುವುದಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹೇಳಿಕೊಂಡಿದೆ. ಇದಕ್ಕೆ ಪ್ರತಿಯಾಗಿ ತನ್ನ ಬಳಿ ಆಡಿಯೋ ಅಲ್ಲ, ವಿಡಿಯೊನೇ ಇದೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.

ಬಿಜೆಪಿ ರಾಜ್ಯ ಅಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಅವರ ಧ್ವನಿ ಇದೆ ಎಂದು ಹೇಳಲಾಗಿರುವ ಆಡಿಯೋದ ಕುರಿತು ಚರ್ಚೆಗಳು ನಡೆಯುತ್ತಿರುವ ಹಾಗೆಯೇ, ” ಕಾಂಗ್ರೆಸ್‌-ಜೆಡಿಎಸ್‌ ಶಾಸಕರಿಗೆ ಯಡಿಯೂರಪ್ಪ ಆಮಿಷ ಒಡ್ಡಿರುವ ಆಡಿಯೋ ಅವರದ್ದು ಅಲ್ಲ ಎಂದಾದರೆ ನಾನು ರಾಜೀನಾಮೆ ನೀಡುತ್ತೇನೆ,” ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸವಾಲೆಸೆದಿದ್ದಾರೆ. ಅವರು ಈ ಸವಾಲನ್ನು ಧರ್ಮಸ್ಥಳದಲ್ಲಿ ಹಾಕುವ ಮೂಲಕ ಇಡೀ ಪ್ರಕರಣಕ್ಕೆ ಮತ್ತೂಂದು ಆಯಾಮವನ್ನು ನೀಡಿದ್ದಾರೆ.

. ಆಡಿಯೋದಲ್ಲಿ ಮಾತನಾಡಿದ್ದು, ತಾನೇ ಎಂದು ಬಿ.ಎಸ್. ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಹೀಗಾಗಿ ಬಿಎಸ್ ವೈ ವಿರುದ್ಧ ಮೈತ್ರಿ ಸರ್ಕಾರ ಎಸಿಬಿಗೆ ದೂರು ಕೊಡ್ತಾರಾ ಅಥವಾ ಬಿಎಸ್ ವೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಗೆ ಸೂಚಿಸುತ್ತಾರಾ, ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರಕರಣದ ತನಿಖೆಗೆ ಆದೇಶಿಸುತ್ತಾರಾ ಎಂಬುದು ಸದ್ಯದ ಕುತೂಹಲವಾಗಿದೆ