ಚಳ್ಳಕೆರೆ: ಅಲ್ಪ ಸಂಖ್ಯಾತರು ಹಾಗೂ ಹಿಂದುಳಿದ ಜನಾಂಗದವರಿಗಾಗಿ ಹತ್ತು ಹಲವು ಯೋಜನೆಗಳನ್ನು ಸರಕಾರ ಜಾರಿಗೊಳಿಸಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಡರಾಗುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದಿಂದ ಶನಿವಾರ ಅಲ್ಪಂಖ್ಯಾತ  ಮೂರು ಸ್ವ-ಸಹಾಯ ಗುಂಪುವಗಳಿಗೆ,  ೧೦ ಫಲಾನುಭವಿಗಳಿಗೆ ವೈಯುಕ್ತಿಕ ಹಾಗೂ ಗಂಗಾಕಲ್ಯಾಣದ ಕೊಳವೆ ಬಾವಿಗಳ ಚೆಕ್‌ಗಳನ್ನು ವಿತರಿಸಿ ಮಾತನಾಡಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಾರ್ಷಿಕ ಶೇ ೪ ರ ಬಡ್ಡಿದರದಲ್ಲಿ  ಶ್ರಮಿಕ ಸಾಲ ಯೋಜನೆಯಡಿ ೫ ಸಾವಿರ ಸಹಾಯದನ ೧೫ ರ ಮರುಪಾತಿಯಂತೆ ೨೪ ಜನರಿಗೆ ತಲಾ ೨೦ ಸಾವಿರೂ ನಂತೆ ೪.೮೦ ಲಕ್ಷರೂ, ಹಾಗೂ ಮೈಕೋ ಸಾಲ ಯೋಜನೆಯಡಿ ಮೂರು ಮಹಿಳಾ ಸ್ವಸಹಾಯ ಗುಂಪುಗಳಿಗೆ ವಾರ್ಷಿಕ ಶೇ ೫ ರ ಬಡ್ಡಿದರದಂತೆ ೩,೫೦ ಲಕ್ಷ ರೂ ಸಹಾಯದನ ಹಾಗೂ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ತಲಾ ೫ ಜನರಿಗೆ ೧.೫೦ ಲಕ್ಷ ರೂನಂತೆ ಕೊಳವೆ ಬಾವಿ ಹಾಗೂ ನೀರಾವರಿ ಸೌಲಭ್ಯಗಳ ಚೆಕ್ ವಿತರಿಸಿದ ಅವರು ಅಲ್ಪಸಂಖ್ಯಾತರು ಸರಕಾರಿ ಸೌಲಭ್ಯಗಳನ್ನು ಪಡೆದು ಸದುಪಯೋಗ ಪಡಿಸಿಕೊಂಡು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಸುಸಂಸ್ಕೃತರನ್ನಾಗಿ ಮಾಡಬೇಕು ಎಂದರು.
ಅಲ್ಪಸಂಖ್ಯಾತ ಇಲಾಖೆ ಕಚೇರಿ ಸಹಾಯಕ ಕೆ.ಪ್ರಹ್ಲಾದ್ ಮಾತನಾಡಿ ತಮ್ಮ ಇಲಾಖೆಯಿಂದ ಗಂಗಾಕಲ್ಯಾ ಯೋಜನೆಗೆ ಮಂಜುರಾತಿ ಯಾದ ಹಣವನ್ನು ಫಲಾನುಭವಿಗಳ ಕೈಗೆ ನೀಡದೆ ಇಲಾಖೆ ವತಿಯಿಂದಲೇ ಕೊಳವೆ ಬಾವಿ ಕೊರೆಸಿ ಅಗತ್ಯ ಸಾಮಾಗ್ರಿಗಳನ್ನು ವಿತರಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಇಲಾಖೆ ಸಹಾಯ ಸಂತೋಷ್, ಮಾಜಿ ತಾಪಂ ಅಧ್ಯಕ್ಷ ರಂಗಸ್ವಾಮಿ, ಮಾಜಿ ಪುರಸಭೆ ಸದಸ್ಯ ಮುಜೀಬುಲ್ಲ, ಭೂಸೇನಾ ನಿಮಗದ ಎಇಇ ದೇವರಾಜ್, ಇಂಜಿನಿಯರ್ ಉಮೇಶ್ ಇತರರಿದ್ದರು.