ಚಿತ್ರದುರ್ಗ: ಬುರುಜನಹಟ್ಟಿಯಲ್ಲಿರುವ ಅರಸು ಏಜೆನ್ಸಿಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು ಒಂದು ಟನ್ ಪ್ಲಾಸ್ಟಿಕ್ ಕವರ್‌ಗಳನ್ನು ನಗರಸಭೆಯವರು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪವಿರುವ ಅರಸು ಏಜೆನ್ಸಿ ಮನೆ/ಗೋದಾಮು ಮೇಲೆ ನಗರಸಭೆ ಪೌರಾಯುಕ್ತರಾದ ಚಂದ್ರಪ್ಪ ಮತ್ತು ಸಿಬ್ಬಂದಿಯವರು ಸಂಜೆ ದಾಳಿ ನಡೆಸಿ ೩೨ ಬಂಡ್‌ಗಳನ್ನು ಪಶಕ್ಕೆ ತೆಗೆದುಕೊಂಡರು.

ಮನೆಯಲ್ಲಿಯೇ ಗೋದಾಮು ನಿರ್ಮಿಸಿಕೊಂಡಿದ್ದ ಇವರಿಂದ ಪ್ಲಾಸ್ಟಿಕ್ ಕವರ್‌ಗಳನ್ನು ಪಡೆದು ಬೀದಿ ಬದಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಿಸಿದಾಗ ಅರಸು ಏಜೆನ್ಸಿಯವರು ಪ್ಲಾಸ್ಟಿಕ್ ಕವರ್‌ಗಳನ್ನು ಮಾರಾಟ ಮಾಡುತ್ತಿರುವ ಮಾಹಿತಿ ತಿಳಿದು ದಾಳಿ ನಡೆಸಿ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡು ನಗರಸಭೆಯವರು ಹತ್ತು ಸಾವಿರ ರೂ. ದಂಡ ವಿಧಿಸಿದರು.
ಪರಿಸರ ಇಂಜಿನಿಯರ್ ಜಾಫರ್, ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಸರಳ, ಭಾರತಿ, ಕಾಂತರಾಜ್, ಅಶೋಕ್ ದಾಳಿಯಲ್ಲಿ ಪಾಲ್ಗೊಂಡಿದ್ದರು.