ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿಡಿ.ದೇವರಾಜಅರಸುರವರ103 ನೇ ಜನ್ಮ ದಿನಾಚರಣೆ ಅಂಗವಾಗಿ ಅವರಭಾವಚಿತ್ರಕ್ಕೆಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿರವೀಂದ್ರ ಹಾಗೂ ಜಿಲ್ಲಾರಕ್ಷಣಾಧಿಕಾರಿ ಶ್ರೀನಾಥ್ ಎಂ.ಜೋಷಿರವರು ಪುಷ್ಪನಮನ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಬಿ.ಸಿ.ಎಂ.ಇಲಾಖೆ ಚಿತ್ರದುರ್ಗಇವರ ಸಂಯುಕ್ತಾಶ್ರಯದಲ್ಲಿ ಮಾಜಿ ಮುಖ್ಯಮಂತ್ರಿಡಿ.ದೇವರಾಜಅರಸುರವರ 103 ನೇ ಜನ್ಮ ದಿನಾಚರಣೆಯನ್ನುಅತ್ಯಂತ ಸರಳವಾಗಿ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಪ್ರೊಬೇಷನರಿ ಉಪವಿಭಾಗಾಧಿಕಾರಿ ಸುರೇಖ ಮಾತನಾಡಿಅಭಿವೃದ್ದಿ ಹರಿಕಾರ ಹಾಗೂ ಕರ್ನಾಟಕದರೂವಾರಿಯಾದಅರಸುರವರು ಭೂ ಸುಧಾರಣಾಕಾಯ್ದೆಯನ್ನುಜಾರಿಗೆತರುವ ಮೂಲಕ ಬಡವರಿಗೆ, ದೀನದಲಿತರಿಗೆ, ಗೇಣಿದಾರರಿಗೆ ಭೂಒಡೆತನವನ್ನು ನೀಡಿದ್ದರು.ಇವರುರಾಜ್ಯದಲ್ಲಿನ ಅನೇಕ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಅಭಿವೃದ್ದಿಗೆಕಾರಣರಾಗಿದ್ದಾರೆ. ಹಾಗೂ ಜೀತವಿಮುಕ್ತಿ, ಹಾವನೂರುಆಯೋಗರಚನೆÀ, ಹಿಂದುಳಿದ ವರ್ಗಗಳಿಗೆ ಹಾಸ್ಟೆಲ್ ಸೌಲಭ್ಯ ಸೇರಿದಂತೆ ಬಡವರು, ದೀನದಲಿತರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದರು ಎಂದರು.

ಸದ್ಬಾವನಾದಿನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕಾರ;
ಎಲ್ಲಾಧರ್ಮ, ಭಾಷೆ ಹಾಗೂ ರಾಜ್ಯಗಳ ಜನರಲ್ಲಿ ಸೌಹಾರ್ದತೆಯನ್ನು ಉತ್ತೇಜಿಸಿ ಎಲ್ಲರಲ್ಲೂ ಸದ್ಭಾವನೆಯನ್ನು ಮೂಡಿಸಿ ಹಿಂಸಾಚಾರವನ್ನುತ್ಯಜಿಸುವಂತೆ ಮಾಡಲು ಪ್ರತಿ ವರ್ಷಆಗಸ್ಟ್ 20 ರಂದು ಸದ್ಬಾವನಾ ದಿನವನ್ನಾಗಿಆಚರಿಸಲಾಗುತ್ತದೆ.ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾರವರಅಧ್ಯಕ್ಷತೆಯಲ್ಲಿ ಸದ್ಬಾವನಾ ದಿನದ ಅಂಗವಾಗಿ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.
ಅಪರಜಿಲ್ಲಾಧಿಕಾರಿ ಸಂಗಪ್ಪರವರುಜಾತಿ, ಧರ್ಮ, ಪ್ರದೇಶ, ಮತಅಥವಾ ಭಾಷೆಯ ಬೇದಭಾವವಿಲ್ಲದೇ ಭಾರತದಎಲ್ಲಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿಕಾರ್ಯ ನಿರ್ವಹಿಸುತ್ತೇನೆಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಅಲ್ಲದೇ ವೈಯಕ್ತಿಕವಾಗಿಯಾಗಲೀಅಥವಾ ಸಾಮೂಹಿಕಾಗಿಯಾಗಲಿ ನಮ್ಮಲ್ಲಿರುವಎಲ್ಲ ಬೇದಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇನೆಂದು ಸಹ ಪ್ರತಿಜ್ಞೆ ಮಾಡುತ್ತೇನೆಎಂದುಪ್ರತಿಜ್ಞಾ ವಿಧಿ ಬೋಧಿಸಿದರು.
ಬಿ.ಸಿ.ಎಂ.ಅಧಿಕಾರಿ ಶಿವಪ್ಪ ಮುದುಕಣ್ಣನವರ್, ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕರಾದರಾಜಶೇಖರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಕಚೇರಿ ಸಿಬ್ಬಂದಿಯವರು ಉಪಸ್ಥಿತರಿದ್ದರು