ವಿಜಯಪುರ: ಮಾಜಿ ಡಿ.ವೈ.ಎಸ್.ಪಿ. ಅನುಪಶೆಣೈ ಯುಗಾದಿ ಹಬ್ಬದ ದಿನ ಪಕ್ಷದ ಅಧಿಕೃತ ಚಿಹ್ನೆಯನ್ನು ಬಿಡುಗಡೆಗೊಳಿಸಿದರು.

ಅವರಿಗೆ  ಚುನಾವಣಾ ಆಯೋಗ ಬೆಂಡೆ ಕಾಯಿ ಚಿತ್ರವನ್ನು ಪಕ್ಷದ ಅಧಿಕೃತ ಚಿಹ್ಹೆಯನ್ನಾಗಿ ನೀಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಸಿಕ್ಕಿರುವ ಮಾನ್ಯತೆ ಹಾಗೂ ಪಕ್ಷಕ್ಕೆ ಸಿಗಬೇಕಾಗಿರುವ ಮಾನ್ಯತೆ ಬಗ್ಗೆ ಹೇಳಿದರು.

ವಿಜಯಪುರ ಜಿಲ್ಲೆಯ ಬಸವೇಶ್ವರರ ಜನ್ಮಸ್ಥಳ, ಬಸವನ ಬಾಗೇವಾಡಿಯಲ್ಲಿಂದು ತಮ್ಮ ಪಕ್ಷದ ಲೋಗೋ ಬಿಡುಗಡೆ ಮಾಡುವ ಮೂಲಕ ರಾಜಕೀಯಕ್ಕೆ ತಾವು ಬರುವುದನ್ನು ಖಚಿತಪಡಿಸಿದ್ದಾರೆ