ಚಿತ್ರದುರ್ಗ:  ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡದಂತೆ ಲಾಕ್‍ಡೌನ್ ಜಾರಿಯಲ್ಲಿದ್ದು, ಕೆಲವು ಅಗತ್ಯ ಸೇವೆಗಳಿಗೆ ಪಾಸ್‍ಗಳನ್ನು ಪಡೆಯಲು ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್‍ರವರ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.

ಪಾಸ್ ಅಗತ್ಯವಿರುವುದು: ದಿನಸಿ ಮತ್ತು ಪಡಿತರ ಅಂಗಡಿ ನೌಕರರು, ಡೈರಿ ಮತ್ತು ಹಾಲ್ ಬೂತ್ ಉದ್ಯೋಗಿಗಳು, ಪ್ರಾಣಿಗಳ ಮೇವಿನ ಅಂಗಡಿ, ಮಾಂಸ, ಮೀನು ಅಂಗಡಿ ನೌಕರರು, ಐಟಿ ಮತ್ತು ಐಟಿ ಸಂಬಂಧಿತ ಅಗತ್ಯ ಸೇವಾ ನೌಕರರು, ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮಿನ ನೌಕರರು, ಉತ್ಪಾದನಾ ಮತ್ತು ಅಗತ್ಯ ಸರಕು ಸಾರಿಗೆ ನೌಕರರು, ಪ್ರವಾಸಿಗರಿರುವ ಮತ್ತು ಲಾಕ್‍ಡೌನ್‍ನಿಂದ ಸಿಕ್ಕಿಹಾಕಿಕೊಂಡಿರುವ ಹೋಟೆಲ್‍ಗಳ ನೌಕರರು ಇವರುಗಳಿಗೆ ಪಾಸ್ ಅಗತ್ಯವಿರುತ್ತದೆ.

ಪಾಸ್ ಅಗತ್ಯ ಇಲ್ಲದಿರುವುದು: “ಜಿ” ನೋಂದಣಿ ಹೊಂದಿರುವ ಸರ್ಕಾರಿ ವಾಹನಗಳು, ಕೃಷಿ, ಡೈರಿ, ಔಷಧ ಮತ್ತು ಆಹಾರ ಸಂಬಂಧಿತ ಸರಕುಗಳ ವಾಹನಗಳು, ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಾಹನಗಳು (ಕಚೇರಿ ಗುರುತಿನ ಚೀಟಿ ಕಡ್ಡಾಯವಿದೆ), ಬ್ಯಾಂಕ್, ವಿಮಾ ಕಂಪನಿಬ ಉದ್ಯೋಗಿ, ಟೆಲಿಕಾಂ ಮತ್ತು ಇಂಟರ್‍ನೆಟ್ ಕಂಪನಿ, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ, ವಿದ್ಯುತ್ ವಿತರಣೆ ಮತ್ತು ಪ್ರಸಾರ ಘಟಕದ ನೌಕರರು (ಕಚೇರಿಯ ಗುರುತಿನ ಚೀಟಿ ಕಡ್ಡಾಯವಿದೆ), ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುವ ವೈದ್ಯರು, ನೌಕರರು, ದಾದಿಯರು ಮತ್ತು ಔಷಧಿ ಜ್ಞಾನಿ (ಫಾರ್ಮಸಿಸ್ಟ್), ಡೋರ್‍ಸ್ಟೆಲ್ ವಿತರಣಾ ನೌಕರರಾದ ಸ್ವಿಗ್ಗೀ, ಜೋಮ್ಯಾಟೋ, ಅಮೇಝಾನ್, ಪ್ಲಿಪ್‍ಕಾರ್ಟ್ (ಔಷಧಿ ಮತ್ತು ಆಹಾರ ವಿತರಣೆ) (ಕಚೇರಿಯ ಗುರುತಿನ ಚೀಟಿ ಕಡ್ಡಾಯವಿದೆ) ಇವುಗಳಿಗೆ ಪಾಸ್ ಅಗತ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.