ಬೀದರ್: ಪರವಾನಗಿ ಇಲ್ಲದೆ ಕಂಟೈನರ್ ನಲ್ಲಿಅಕ್ರಮವಾಗಿ ಸಾಗಿಸುತ್ತಿದ್ದ 2.52 ಕೋಟಿ ಮೌಲ್ಯದ ಮದ್ಯ ವಶವನ್ನು ಅಬಕಾರಿ ಅಧಿಕಾರಿಗಳು ಹಿಡಿದಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚಂಡಕಾಪುರ್ ಚೆಕ್ ಪೋಸ್ಟ್ ನಲ್ಲಿ ಕಂಟೈನರ್ ವಾಹನದಲ್ಲಿ ಸಾಗಿಸತ್ತಿದ್ದಾಗ ವಾಹನವನ್ನು ತಡೆದು, ತಪಾಸಣೆ ನಡೆಸಿದಾಗ ಮದ್ಯಸಾಗಣಿಸುತ್ತಿದ್ದು ತಿಳಿದುಬಂದಿದೆ.

ಮಹಾರಾಷ್ಟ್ರದಿಂದ ಹೈದರಾಬಾದ್ ಗೆ  ಸಾಗಿಸುತ್ತಿದ್ದ ಅಕ್ರಮ ದೇಶಿ, ವಿದೇಶಿ ಮದ್ಯಗಳನ್ನು ತುಂಬಿದ ಕಂಟೈನರ್ ನ್ನು ವಶಪಡಿಸಿಕೊಂಡ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.