ಬೆಳಗಾವಿ: ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ ಘಟನೆ ರಾಮದುರ್ಗ ತಾಲ್ಲೂಕಿನ ಬಿ.ತಿಮ್ಮಾಪರು ಗ್ರಾಮದಲ್ಲಿ ನಡೆದಿದೆ

ಮೃತರು  ರೇವಪ್ಪ ಕಲ್ಲೋಳಿ, ರತ್ನವ್ವ ಕಲ್ಲೋಳಿ, ಸಚಿನ್ ಹಾಗೂ ಕೃಷ್ಣ ಎಂದು ತಿಳಿದುಬಂದಿದೆ.

ನಿನ್ನೆ ಸಂಜೆ ಭಾರಿ ಮಳೆ-ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು, ಬೆಳಗ್ಗೆ ಜಮೀನಿಗೆ ತೆರಳಿದಾಗ ಘಟನೆ ನಡೆದಿದೆ. ಈ ಬಗ್ಗೆ ಕಟಕೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.!

(ಸಾಂದರ್ಭಿಕ ಚಿತ್ರ)