ಚಿತ್ರದುರ್ಗ: ಲಾರಿ ಹರಿದು ಕುರಿಗಾಹಿ ಯುವಕ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕುರಿಗಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಹುಳಿಯಾರಿನಿಂದ ಹಿರಿಯೂರು ತಾಲ್ಲೂಕಿನ ಕೂನಿಕೆರೆಗೆ ಬರುವಾಗ ನಡೆದಿದೆ.

ಚಳ್ಳಕೆರೆ ತಾಲೂಕಿನ ಪರಶುರಾಂಪುರದ  ತಿಮ್ಮಣ್ಣ ಅವರು ಕುರಿಗಳ ಮಾಲೀಕರಾಗಿದ್ದು, ಕುರಿಕಾಯುತ್ತಿದ್ದ ಗೊಲ್ಲರ ಸಮುದಾಯದ ರಾಜು (22) ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.!