ಕೊಲ್ಹಾಪುರ : ಅಸ್ಸಾಂ ಮೂಲದ ಗರ್ಭಿಣಿಗೆ ರಾಜಸ್ಥಾನದ ಇಬ್ಬರು ಪುರುಷರು ನಿದ್ರೆ ಬರುವ ಮಾತ್ರೆ ನೀಡಿ ಆಕೆಯನ್ನು ಅಪಹರಿಸಿ ಮೇಲೆ ಮಾನಭಂಗ ಎಸಗಿದ್ದಾರೆ. ನಂತರ ಬಲವಂತವಾಗಿ ಮದುವೆಯಾದ ಘಟನೆ ನಡೆದಿದೆ.

6ತಿಂಗಳ ಗರ್ಭಿಣಿ ಮತ್ತು ಆಕೆಯ ಮೂವರು ಮಕ್ಕಳನ್ನು ಅಪಹರಿಸಿದ ಪುರುಷರು ಆಕೆಗೆ ನಿದ್ರೆ ಮಾತ್ರೆ ಮಿಕ್ಸ್ ಮಾಡಿದ ಪಾನೀಯ ಕುಡಿಸಿ ಆಕೆಯ ಮೇಲೆ ಮಾನಭಂಗ ಎಸಗಿ ಬಲವಂತವಾಗಿ ಮದುವೆಯಾಗಿದ್ದಾರೆ. ಬಳಿಕ ಆಕೆಯನ್ನು ತಮ್ಮ ಜೊತೆ ಇರಿಸಿಕೊಂಡು ಆಕೆಯ ಮಕ್ಕಳನ್ನು ಕೊಲ್ಲುವ ಬೆದರಿಕೆ ಹಾಕಿ ತಮ್ಮ ಜೊತೆ ದೈಹಿಕ ಸಂಪರ್ಕ ಹೊಂದುವ0ತೆ ಒತ್ತಾಯಿಸಿದ್ದಾರೆ.

ಕಾಮುಕರಿಂದ ಹೇಗೋ ತಪ್ಪಿಸಿಕೊಂಡು ಬಂದ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.