ಶಿವಮೊಗ್ಗ: ಮುಖ್ಯ ಮಂತ್ರಿ ಕುಮಾರಸ್ವಾಮಿ ಬೆಂಗಾವಲು ಪಡೆಯ ವಾಹನ ಕೊಪ್ಪ ತಾಲೂಕಿನ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ವಿಶೇಷ ಹೋಮ ನಡೆಸಿ ಸಿಎಂ ಹಿಂದಿರುಗುತ್ತಿದ್ದ ವೇಳೆ ಪಲ್ಟಿಯಾಗಿದೆ.

ಆಲ್ದೂರಿನ ಶಂಕರ್ ಫಾಲ್ಸ್ಬಳಿಯ ರಸ್ತೆ ತಿರುವಿನಲ್ಲಿ ಘಟನೆ ನಡೆದಿದ್ದು, ವಾಹನದಲ್ಲಿದ್ದ ಇನ್ಸ್ಪೆಕ್ಟರ್ಪ್ರದೀಪ್ಹಾಗೂ ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಕಾರಿನ ಮುಂಭಾಗ ಹಾಗೂ ಕಿಟಕಿಗಳ ಗಾಜು ಪುಡಿ ಪುಡಿಯಾಗಿವೆ ಎಂದು ತಿಳಿದು ಬಂದಿದೆ.