ವಿಜಯಪುರ: ಸಿನಿಮಾ ರೀತಿಯಲ್ಲಿ ನ್ಯಾಯಾಲಯದ ಮುಂದೆ ಅಪರಿಚತನೊಬ್ಬ ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ತೀರ್ವ ಗಾಯಗೊಂಡ ಬಾಗಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

ಭೀಮಾ ತೀರದ ಹಂತಕ ಗ್ಯಾಂಗ್‍ನವರಾದ ಬಾಗಪ್ಪ ಹರಿಜನ, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಅಲ್ಲದೆ ಒಂದು ಬಾರಿ ಜೈಲಿನಿಂದಲೂ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ.
ಆರೋಪಿ ಬಾಗಪ್ಪ ಹರಿಜನ ಭೀಮಾ ತೀರದ ಹಂತಕ ಕುಖ್ಯಾತಿ ಚಂದಪ್ಪ ಹರಿಜನನ ದೂರದ ಸಂಬಂಧಿಯೂ ಹೌದು ಎನ್ನಲಾಗಿದೆ. ಆರೋಪಿ ಭಾಗಪ್ಪ ಹರಿಜನ ಬಸವರಾಜ ಹರಿಜನ ಎಂಬಾತನನ್ನು ಕೊಲೆಗೈದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜಲನಗರ ಪೊಲೀಸರು ವಿಜಯಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲು ಬಂದಿದ್ದರು ಎನ್ನಲಾಗಿದೆ.
ಗುಂಡಿನ ದಾಳಿಗೊಳಗಾದ ಭಾಗಪ್ಪ ಹರಿಜನ ಈತನನ್ನು ತಕ್ಷಣ ನಗರದ ಬಿಎಲ್ಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರಿಂದ ತಿಳಿದು ಬಂದಿದೆ.

ಗುಂಡು ಹಾರಿಸಿದ ಅಪರಿಚಿತನ್ನು ಹುಡುಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ಕಡೆ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.