ಚಿತ್ರದುರ್ಗ: ಖಾಸಗಿ ಬಸ್ ಪಲ್ಟಿ ಓರ್ವ ಸ್ಥಳದಲ್ಲೇ ಸಾವು, ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾದ ಘಟನೆ ಚಿತ್ರದುರ್ಗ ತಾಲೂಕು ಭರಮಸಾಗರ ಸಮೀಪದ ಎಮ್ಮೆಹಟ್ಟಿ ಬಳಿ ನಡೆದಿದೆ.

ದಾವಣಗೆರೆಯಲ್ಲಿ ಮದುವೆ  ಕಾರ್ಯ ಮುಗಿಸಿ ಚಿತ್ರದುರ್ಗ ತಾಲೂಕಿನ ಪಿಳ್ಳೇಕೇರನಗಳ್ಳಿ ಗ್ರಾಮಕ್ಕೆ ವಾಪಾಸಾಗುತ್ತಿದ್ದ ವೇಳೆ  ದುರಂತ ನಡೆದಿದೆ.

ಮೃತನ ವ್ಯಕ್ತಿ ಪಿಳ್ಳೆಕೆರನ ಹಳ್ಳಿಯ ಅಣ್ಣಪ್ಪ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಭರಮಸಾಗರ ಪೊಲೀಸರ ಭೇಟಿ, ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.