ಚಿತ್ರದುರ್ಗ: 2014 ರ ಕೇಸ್. ಅನಿತಾ ಮತ್ತು ಲೋಕೇಶ ಇವರಿಬ್ಬರು ಪ್ರೀತಿಸಿ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ಆಗಿದ್ದರು. ಮದುವೆ ಆಗಿ ಸ್ವಲ್ಪ ದಿನಗಳ ಕಾಲ ಬಹಳ ಅನ್ಯೋನವಾಗಿ ಸಂಸಾರ ನಡೆಸುತ್ತಿದ್ದರು. ಆನಂತರ ಶುರುವಾಯಿತು ಇವರಿಬ್ಬರ ಮಧ್ಯೆ ಬಿರುಕು ಯಾವಾಗಲು ಗಂಡ ಲೋಕೇಶ್ ಹೆಂಡತಿಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಾ ಕಿರುಕುಳ ನೀಡುತ್ತಿದ್ದ.
ಒಂದು ದಿನ ಅನಿತಾಳನ್ನು ಸಾಯಿಸುವ ಉದ್ದೇಶದಿಂದ ಆಕೆಯ ಮೇಲೆ ಸೀಮೆ ಎಣ್ಣ ಸುರಿದು ಬೆಂಕಿ ಹಚ್ಚಿದ. ಅನಿತಾಳಿಗೆ ಸುಟ್ಟ ಗಾಯಗಳಾದವು. ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಆಕೆಗೆ ಚಿಕಿತ್ಸೆ ಫಲಕಾರಿ ಆಗಿದೆ ಸಾವನ್ನಪಿದಳು.
ಲೋಕೇಶ್ ಮತ್ತು ಆರೋಪಿ ತಿಪ್ಪಮ್ಮ, ಶ್ರೀನಿವಾಸ ಹಾಗೂ ಜಯಮ್ಮ ರ ಮೇಲೆ ಕೋಟೆ ಠಾಣೆಯಲ್ಲಿ ಕೇಸ್ ದಾಖಲಾಯಿತು.
ಈ ಕೇಸ್ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಇಂದು ಘನ ನ್ಯಾಯಾಲಯ ಮೊದಲನೇ ಆರೋಪಿ ಲೋಕೇಶನಿಗೆ ಜೀವಾವಧಿ ಶೀಕ್ಷೆ ಹಾಗೂ ೧೦,೦೦೦ ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಹಾಗೂ ತಿಪ್ಪಮ್ಮ, ಶ್ರೀನಿವಾಸ ಹಾಗೂ ಜಯಮ್ಮ ಇವರ ಮೇಲೆ ಯಾವುದೇ ಅಪಾದನೆ ಸಾಬಿತು ಆಗದೇ ಇರುವುದರಿಂದ ಅವರನ್ನು ಬಿಡುಗಡೆಮಾಡಲಾಗಿದೆ.
ಸರಕಾರದ ಪರವಾಗಿ ಬಿ.ಜಯರಾಮ್ ಅವರು ವಿಚಾರಣೆ ನಡೆಸಿದ್ದರು.