ಚಿತ್ರದುರ್ಗ: ನಕಲಿ ನೋಟು ಮುದ್ರಣ ಮಾಡುತ್ತಿದ್ದ ಜಾಲವನ್ನು ಪೊಲೀಸರು  ಪತ್ತೆ ಹಚ್ಚಿದ್ದಾರೆ.

ಚಿತ್ರದುರ್ಗದ ತಾಜ್ ಮೊಬೈಲ್ ಸೆಂಟರ್ ನಲ್ಲಿ  2ಸಾವಿರ ಮುಖ ಬೆಲೆಯ ನೋಟು ಮುದ್ರಿಸುತ್ತಿದ್ದ ನಾಲ್ವರ ಬಂಧಿಸಲಾಗಿದ್ದು, ಮೂರು ಮಂದಿ ಆರೋಪಿಗಳು ನಾಪತ್ತೆಆಗಿದ್ದಾರೆ  ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಗಳಾದ ಹೊಳಲ್ಕೆರೆ ಟಿಪ್ಪುನಗರ ನಿವಾಸಿ ಸೈಯದ್ ತೌಫಿಕ್ (26), ಚಿತ್ರದುರ್ಗದ ವೆಂಕಟೇಶ್ವರನಗರ ನಿವಾಸಿ ಮೊಹಮದ್ ಜುಬೇರ್(20), ಮೊಹಮದ್ ಅಪ್ತಾಬ್(20), ಹೊಳಲ್ಕೆರೆ ನಿವಾಸಿ ಮನ್ಸೂರ್ ಅಲಿ(20) ಎಂದು ತಿಳಿದು ಬಂದಿದೆ.

ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಲ್ಲಿ ದಾವಣಗೆರೆ ಮೂಲದ ಮಹಮದ್ ಯೂಸೂಫ್, ಬೆಂಗಳೂರು ಮೂಲದ ಪ್ರಕಾಶ್ ಮತ್ತು ಮಹೇಶ್ ಎಂದು ತಿಳಿದ ಬಂದಿದೆ.
ಬಂಧಿತರಿಂದ 2ಸಾವಿರ ಮುಖಬೆಲೆಯ 64ನೋಟುಗಳು ಹಾಗೂ ನೋಟು ಮುದ್ರಣ ಪರಿಕರಗಳನ್ನು ವಶಕ್ಕೆ ಪೊಲೀಸರು ಪಡೆದಿದ್ದಾರೆ.

ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೋಟೆ ಠಾಣೆ ಸಿಪಿಐ ಫೈಜುಲ್ಲಾ ನೇತೃತ್ವದ ತಂಡಯಶಸ್ವಿ ಕಾರ್ಯಾಚರಣೆ  ನಡೆಸಿದೆ.

ಈ ತಂಡಕ್ಕೆ ಹೆಚ್ಚುವರಿ ಎಸ್ಪಿ ರಾಮಲಕ್ಷ್ಮಣ ಅರಸಿದ್ದಿ ಹಾಗೂ ಚಿತ್ರದುರ್ಗ ಎಸ್ಪಿ ಶ್ರೀನಾಥ್ ಎಂ ಜೋಷಿ ಶ್ಲಾಘನೆಮಾಡಿದ್ದಾರೆ.