ಮಂಗಳೂರು:ಹಣಕ್ಕಾಗಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಅಸ್ರಾರುದ್ದೀನ್, ಪ್ರಾಯ (26) ತೊಕ್ಕೊಟ್ಟುವಿನ ಅಸ್ಕಾನ್ ಶೇಖ್ (25) ಬಂಧಿತ ಆರೋಪಿಗಳು ಮಂಗಳೂರು ನಗರದ ತೊಕ್ಕೊಟ್ಟು ಟಿ.ಸಿ. ರಸ್ತೆಯಲ್ಲಿರುವ MITS ಎಂಬ ಸಂಸ್ಥೆಯಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ರೂ. 10 ಸಾವಿರ ದಿಂದ 45 ಸಾವಿರ ಹಣಕ್ಕೆ ನಕಲಿ ಅಂಕಪಟ್ಟಿ ಹಾಗೂ ಸರ್ಟಿಫಿಕೇಟ್ ಗಳನ್ನು ತಯಾರಿಸಿ ಮಾರಾಟ ಮಾಡಿದಲ್ಲಿ ನಿರತರಾಗಿದ್ದರು.

ಸಿಸಿಬಿ ಪೊಲೀಸರು ಇತ್ತೀಚಿಗೆ ಈ ಜಾಲವನ್ನು ಬೇದಿಸಿದ್ದಾರೆ.