ಬೀದರ್ : ಚಾಲಕನ ನಿಯಂತ್ರಣ ತಪ್ಪಿ ಕಾರು ಆಳವಾದ ಹಳ್ಳಕ್ಕೆ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭರಾದ್ ತಾಲೂಕಿನ ಎಕಂಬಾ ಗ್ರಾಮದ ಬಳಿ ನಡೆದಿದೆ.

ಮೃತರು ಸಾವಳಿ ಗ್ರಾಮದ ನಿವೃತ್ತಿ ಹುಲಿಯಪ್ಪ, ದುರ್ಗೇಶ್ ಹಾಗೂ ನೀಲಾಬಾಯಿ ಎಂದು ತಿಳಿದ ಬಂದಿದೆ. ಸೋಪಾನ ಕೇರಬಾ, ಮಂಗಲಾ ಹಾಗೂ ಕಾರು ಚಾಲಕ ಹೌಗಿರಾವ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಮೂಲತಃ ಔರಾದ್ ತಾಲೂಕಿನವರಾಗಿದ್ದು, ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ವಾಪಸ್ ಹೈದರಾಬಾದ್ ಗೆ ಹೋಗುವಾಗ ಅಪಘಾತ ನಡೆದಿದೆ. ಘಟನೆ ಸಂಬಂಧ ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.