ಚಿತ್ರದುರ್ಗ: ಜಿಲ್ಲೆಯ ಅಬಕಾರಿ ಇಲಾಖೆ ಹಿರಿಯೂರು ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ 1 ಕೆ.ಜಿ. 20 ಗ್ರಾಂ ಒಣ ಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಹೊಳಲ್ಕೆರೆ ತಾಲ್ಲೂಕು ಗಿಲಿಕೇನಹಳ್ಳಿ ಗ್ರಾಮ ನಿವಾಸಿ ಶ್ರೀನಿವಾಸ್ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ಬಳಿಕ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಅಬಕಾರಿ ಉಪ ಅಧೀಕ್ಷಕ ಮೊತಿಲಾಲ್, ಅಬಕಾರಿ ನಿರೀಕ್ಷಕರುಗಳಾದ ವನಜಾಕ್ಷಿ, ಪ್ರಹ್ಲಾದಾಚಾರ್ಯ ಸೇರಿದಂತೆ ವಿವಿಧ ಅಧಿಕಾರಿ, ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.