ಕಾವೂರು: ನ.3ರಂದು ಕಾವೂರು ಮಲ್ಲಿ  ಲೇಔಟ್ ನಿವಾಸಿಯಾಗಿರುವ ಸುರೇಂದ್ರನ್ (60) ಎಂಬವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದು, ಓರ್ವ ಆರೋಪಿಯನ್ನು ಪೋಲಿಸರು ಇದೀಗ ಬಂದಿಸಿದ್ದಾರೆ. ಆರೋಪಿಯು ಫ್ಯಾಬ್ರಿಕೇಶನ್ ವೃತ್ತಿ ಮಾಡುತ್ತಿದ್ದು,ಕೊಲೆಯಾದ ಸುರೇಂದ್ರನ್ ಹಾಗೂ ಈತನಿಗೆ ಹಣದ ವ್ಯವಹಾರ ಇದ್ದು, ಕೇವಲ ಇಪ್ಪತ್ತು ಸಾವಿರದ ವಿಚಾರದಲ್ಲಿ ಮಾತಿನ ಚಕಮಕಿ ನಡೆದು  ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಇನ್ನಷ್ಟು ತನಿಖಾ ವರದಿಯಿಂದ ಪ್ರಕರಣ ಬೆಳಕಿಗೆ ಬರಲಿದೆ ಎನ್ನಲಾಗಿದೆ.