ಚಿತ್ರದುರ್ಗ: ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಬೊಗಳೆರಹಟ್ಟಿ ಸಮೀಪ ನಡೆದಿದೆ. 

ಕೇಶವ ಮೂರ್ತಿ(40), ನಾಗಮ್ಮ(30) ರಾಧಿಕಾ(22) ಮೃತಪಟ್ಟವರು ಎಂದು ತಿಳಿದು ಬಂದಿದೆ.

 ಇವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬಂಗಾರಕ್ಕನಗುಡ್ಡ ಗ್ರಾಮದ ನಿವಾಸಿಗಳು. 

ಚಾಲಕನ ನಿಯಂತ್ರಣ ತಪ್ಪಿದ ಕಾರು ಮತ್ತೊಂದು ಕಾರು ಹಾಗೂ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.