ಬೆಳಗಾವಿ: ಕಾರಗೃಹದಿಂದ ಕೈದಿಗಳು ಪಾರಾರಿ ಆಗುವುದು ಸಾಮಾನ್ಯ ಅಲ್ಲವೆ ಅದರಂತೆ ಈ ಬಾರಿ ಚಿಕ್ಕೋಡಿ ಉಪ ಕಾರಾಗೃಹದಿಂದ ಶುಕ್ರವಾರ ಮೂವರು ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದಾರೆ.

ಪರಾರಿ ಅಗುವುದಕ್ಕೆ ಕಂಡುಕೊಂಡ ಮಾರ್ಗ ಶೌಚಾಲಯ.  ಕೈದಿಗಳು ಗೋಡೆ ಕೊರೆದು ಪರಾರಿ ಆಗಿದ್ದಾರೆ. ಬೇರೆ ಬೇರೆ ಪ್ರಕರಣದಲ್ಲಿ ಜೈಲು ಸೇರಿದ್ದ ಅಶೋಕ ಬೋಸಲೆ, ಶತರ ಪವಾರ, ನಿತಿನ್ ಜಾದವ್ ಮೂವರು ಪರಾರಿಯಾಗಿದ್ದಾರೆ.

ಚಿಕ್ಕೋಡಿ ಉಪ ಕಾರಾಗೃಹಕ್ಕೆ ಹೆಚ್ಚುವರಿ ಎಸ್​ಪಿ ರವೀಂದ್ರ ಗಡಾದ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಂದು ತಿಳಿದು ಬಂದಿದೆ.