ಬೆಂಗಳೂರು: ನಿಮ್ಮ ಆಧಾರ್ ಸಂಖ್ಯೆಯನ್ನು ವಿಚಾರಿಸುತ್ತಾ ಯಾವ ಸಮಯದಲ್ಲೂ ಒಂದು ಕರೆ ಬರುವ ಸಾಧ್ಯತೆಯಿದೆ. ಅವರು ಯಾವುದಾದರೂ ಮೊಬೈಲ್ ಕಂಪನಿಯವರೆಂದು  ಫೋನ್ ಮಾಡುತ್ತಾರೆ.

ಅದು (ಐಡಿಯಾ, ಏರ್ಟೆಲ್, ವೋಡಾಫೋನ್) ಎಂದು ತಿಳಿಸುವರು. ನಂತರ ಒಂದನ್ನು ಒತ್ತಲು ಹೇಳುವರು. ಆಮೇಲೆ ಬೇರೆ ಸಂಖ್ಯೆಗಳನ್ನು ಒತ್ತಲು ಹೇಳುವರು. ಆಮೇಲೆ ಬೇರೆ  ಬರುವ OTP ( One Time Password ) ಕೊಡಲು ಹೇಳುವರು. ಅದು ಕೊಟ್ಟರೆ ಆಧಾರ್ ಸಂಖ್ಯೆಯೊಂದಿಗೆ ಜೋಡಿಸಲ್ಪಟ್ಟ ನಮ್ಮೆಲ್ಲಾ ಬ್ಯಾಂಕ್ ಖಾತೆಗಳು ಖಾಲಿಯಾಗುವುದು.

ಆದಕಾರಣ ಬ್ಯಾಂಕಿನವರೋ, ಇತರ ಮೊಬೈಲ್ ಕಂಪನಿಯವರೋ ಎಂಬ ಹೆಸರಿನಲ್ಲಿ ಯಾರು ಕರೆ ಮಾಡಿದರೂ ನೇರವಾಗಿ ತಲುಪಿಸುವುದಾಗಿ ತಿಳಿಸಿರಿ. ಮೋಸ ಹೋಗದಂತೆ ಜಾಗ್ರತೆ ವಹಿಸಿರಿ.