ಕಲಬುರಗಿ : ಸಾಮಾನ್ಯವಾಗಿ ದರೋಡೆಕೋರರು ದರೋಡೆಮಾಡುವಾಗ ಹಲವಾರು ತಂತ್ರಗಳನ್ನು ಬಳಸುತ್ತಾರಲ್ವ. ಆದ್ರೆ ಇಲ್ಲೊಂದು ದರೋಡೆಕೋರರ ಗುಂಪು  ಯಾವರೀತಿಯಾಗಿ ದರೋಡೆಮಾಡುತ್ತಿದ್ದರು ಎಂಬುದನ್ನು ಅವರೇ ಬಾಯಿ ಬಿಟ್ಟಿದ್ದಾರೆ.!

ಈ ದರೋಡೆಕೋರರು ರಸ್ತೆಗೆ ಅಡ್ಡಲಾಗಿ ಹಗ್ಗವನ್ನು ಹಾಕಿ ವಾಹನಗಳನ್ನು ತಡೆಯುತ್ತಿದ್ದರಂತೆ. ಬಳಿಕ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡುತ್ತಿದ್ದರಂತೆ.

ಹೀಗೆ ದರೋರೆಮಾಡುತ್ತಿದ್ದ ಮೂವರನ್ನು ಆಳಂದ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಆಳಂದ ತಾಲೂಕಿನ ಶಖಾಪುರ ತಾಂಡಾದ ವಿಜಯ, ಸಿದ್ಧರಾಮ್ ಹಾಗೂ ರಾಮ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಎರಡು ಬೈಕ್, ರಾಡ್ , ಖಾರದ ಪುಡಿ ಮತ್ತು ಹಗ್ಗವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈಗಾಗಲೇ ಕೆಲ ದರೋಡೆ ಪ್ರಕರಣಗಳಲ್ಲಿ ಭಾಗಿ ಆಗಿರೋದಾಗಿ ಆರೋಪಿಗಳು ಒಪ್ಪಿಕೊಂಡಿದ್ದು ಮತ್ತೊಂದು ದರೋಡೆಗೆ ಸಿದ್ಧವಾಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.!