ಲಖ್ನೋ: ಅಪ್ರಾಪ್ತೆ ಮೇಲೆ ಆಕೆಯ ಗೆಳೆಯ ಒಳಗೊಂಡ0ತೆ ನಾಲ್ವರು ಸೇರಿ ಅತ್ಯಾಚಾರ ಎಸಗಿ, ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲಿ ಹರಿಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಹಲವು ದಿನಗಳಿಂದಲೂ ಗೆಳೆಯ ಅತ್ಯಾಚಾರ ನಡೆಸುತ್ತಿದ್ದ ಎಂದು ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆತನ ಸ್ನೇಹಿತರೂ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾಳೇ. ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದು, ಜನವರಿ ೧ರಂದು ಆನ್ ಲೈನ್ ನಲ್ಲಿ ಹರಿಬಿಟ್ಟಿರುವುದಾಗಿ ತಿಳಿದುಬಂದಿದೆ.

ವಿಡಿಯೋ ವೈರಲ್ ಆದ ನಂತರ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಆಕೆಯ ಗೆಳೆಯ ಹಾಗೂ ನಾಲ್ವರು ಸ್ನೇಹಿತರ ಮೇಲೆ ದೂರು ದಾಖಲಿಸಿದ್ದು, ಎಲ್ಲರ ಬಂಧನಕ್ಕೆ ಬಲೆ ಬೀಸಿರುವುದಾಗಿ ಎಎಸ್‌ಪಿ ಸತ್ಯನಾರಾಯಣ ಪ್ರಜಾಪತ್ ತಿಳಿಸಿದ್ದಾರೆ.