ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಗಿರಿಯಮ್ಮನಹಳ್ಳಿ ಬಳಿ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ  ಬೈಕ್ ಸವಾರರು ಇಬ್ಬರು ಮೃತಪಟ್ಟಿದ್ದಾರೆ.  ಅಪಘಾತದ ಬಳಿಕ ವಾಹನ ಸಮೇತ ಚಾಲಕ ಪರಾರಿಆಗಿದ್ದಾನೆ.

ಮನ್ನಕೋಟೆ ಗ್ರಾಮದ ಜಗದೀಶ(25), ತಿಮ್ಮಪ್ಪನಹಳ್ಳಿಯ ಶ್ರಿನಿವಾಸ(26) ಮೃತರು ಎಂದು ತಿಳಿದುಬಂದಿದೆ.

ಚಳ್ಳಕೆರೆ ಯಿಂದ ಊರಿಗೆ ಮರಳುವಾಗ ಘಟನೆ ನಡೆದಿದೆ. ಇಬ್ಬರು ಬಾರ್ ಗಳಲ್ಲಿ ಕೆಲಸ ಮಾಡುತ್ತಿದ್ದರು.  ಕೆಲಸ ಮುಗಿಸಿ ಹಿಂದಿರುಗುವಾಗ  ಈ ಅನಾಹುತ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಳಕು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.