ಚಿತ್ರದುರ್ಗ : ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರಗೈದು ಕೊಲೆ ಬೆದರಿಕೆ ಹಾಕಿದ್ದ ಆರೋಪಿಗೆ 36ವರ್ಷ ಸಜೆ,  ವಿಶೇಷ ಹಾಗೂ 2ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು ನೀಡಲಾಗಿದೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಅಮಕುಂದಿ ಗ್ರಾಮದ ನಿವಾಸಿ ಮಾರಣ್ಣ(30) ಜೀವಮಾನವಿಡೀ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿ, 2015ರ ಏಪ್ರಿಲ್ 19ರಂದು ಬೆಳಗಿನ ಜಾವ ಮೂತ್ರವಿಸರ್ಜನೆಗೆ ಮನೆಯಿಂದ ಹೊರಬಂದಿದ್ದ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿದ್ದ ಮಾರಣ್ಣ, ಮಾರನೆ ದಿನ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ  ಸರ್ಕಾರಿ ಶಾಲೆಯ ಕಟ್ಟೆ ಮೇಲೆ ಅತ್ಯಾಚಾರ ಮಾಡಿ ವಿಷಯ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಕಾಮುಕ, ಆರೋಪಿಯನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿಲಾಗಿತ್ತು.

ಸಂತ್ರಸ್ತರ ಪರ ವಾದ ಮಂಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಎನ್.ಬೀರಲಿಂಗಪ್ಪ, ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ.ವೀರಣ್ಣ, ಅರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ ಜೀವಾವಧಿ ಶಿಕ್ಷೆ,

30ಸಾವಿರ ದಂಡ, ಕಲಂ366(ಎ) ಅಡಿ 10ವರ್ಷ ಕಠಿಣ ಶಿಕ್ಷೆ, 20ಸಾವಿರ ರೂ.ದಂಡ, ಕಲಂ354(ಎ) ಅಡಿ 3ವರ್ಷ ಕಠಿಣ ಶಿಕ್ಷೆ, 10ಸಾವಿರ ರೂ.ದಂಡ, ಕಲಂ366 ಅಡಿ 7ವರ್ಷ ಶಿಕ್ಷೆ, 10ಸಾವಿರ ರೂ.ದಂಡ, ಹಾಗೂ ಕಲಂ506ರ ಅಡಿ 2ವರ್ಷ ಶಿಕ್ಷೆ ಮತ್ತು 5ಸಾವಿರ ರೂ ದಂಡ ವಿಧಿಸಿ ಆದೇಶ ನೀಡಲಾಗಿದೆ.