ಚಿತ್ರದುರ್ಗ: ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳಿಗೆ 1ವರ್ಷ ಶಿಕ್ಷೆ ಹಾಗೂ ೧೫ ಸಾವಿರ ದಂಡ ತಪ್ಪಿದ್ದಲ್ಲಿ 3 ತಿಂಗಳು ಸಾದಾ ಶಿಕ್ಷೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಎಸ್.ಬಿ. ವಸ್ತ್ರಮಠ ಅವರು ತೀರ್ಪುನೀಡಿದ್ದಾರೆ.
2015 ರಂದು ಹೊಸದುರ್ಗ ತಾಲ್ಲೂಕಿನ ಕೋರಲಮಾವಿನಹಳ್ಳಿ ಇರುವ ವೇದಾವತಿ ನದಿ ತೀರದಲ್ಲಿ ಸರಕಾರಿ ಸರ್ವೆ ನಂ೦.9 ರಲ್ಲಿ ಆಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಆರೋಪಿ ಬಲರಾಮ್, ರಂಗನಾಥ ಮತ್ತು ಶಿವಣ್ಣ ಎಂಬುವವರು ಒಂದು ಟಿಪ್ಪರ್ ಲಾರಿ ಹಾಗೂ 2 ಟ್ರಾಕ್ಟರ್ ನಲ್ಲಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಸುತ್ತಿದ್ದಾಗ, ಪೊಲೀಸರು ಆರೋಪಿಗಳನ್ನು ಹಿಡಿದು ಕೇಸ್ ದಾಖಲಿಸಿದ್ದರು.
ಈ ಪ್ರಕರಣ ವಿಚಾರಣೆಯನ್ನು ಕೈಗೆತ್ತುಕೊಂಡ ಜಿಲ್ಲಾ ಸತ್ರ ನ್ಯಾಯಾಲಯ ಇಂದು ಮಹತ್ವದ ತೀರ್ಪುನ್ನು ನೀಡಲಾಗಿದೆ.
ಸರಕಾರದ ಪರವಾಗಿ ಬಿ.ಜಯರಾಂ ವಿಚಾರಣೆ ನಡೆಸಿದ್ದರು.