ಚಿತ್ರದುರ್ಗ: ಜಿಲ್ಲೆಯ ಅಬಕಾರಿ ಇಲಾಖೆ ಹಿರಿಯೂರು ವಲಯ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 48 ರ ಸರ್ವಿಸ್ ರಸ್ತೆಯಲ್ಲಿರುವ ಮದ್ದೇರಹಳ್ಳಿ ಸೇತುವೆ ಬಳಿ ಅಕ್ರಮವಾಗಿ ಆಟೋ ರಿಕ್ಷಾದಲ್ಲಿ 6 ಬಾಕ್ಸ್ ವಿಸ್ಕಿ (55. 62 ಲೀ.) ಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಗುಳಗೊಂಡನಹಳ್ಳಿ ಗ್ರಾಮದ ಗಿರಿಜಮ್ಮ ಹಾಗೂ ಗುಡ್ಡದಯ್ಯ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಪೈಕಿ ಗುಡ್ಡದಯ್ಯ ಅವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಗಿರಿಜಮ್ಮ ಅವರನ್ನು ಬಂಧಿಸಬೇಕಾಗಿರುತ್ತದೆ.
ಅಬಕಾರಿ ಉಪ ಅಧೀಕ್ಷಕ ಮೊತಿಲಾಲ್, ಉಪ ನಿರೀಕ್ಷಕ ನಾಗರಾಜ್, ಅಬಕಾರಿ ರಕ್ಷಕ ಚಿದಾನಂದ ದಾಳಿಯಲ್ಲಿ ಪಾಲ್ಗೊಂಡಿದ್ದರು.