ವನಿತಾ

 ಚಿಂವ್. . . ಚಿಂವ್. .  ಎನ್ನುವ ಅಳಿಲೇ, ನಿನ್ನ ಉಳಿವಿಗೆ ನಮ್ಮ ಅಳಿಲು ಸೇವೆ

ನಿಶ್ಯಬ್ಧ ಪ್ರದೇಶ, ಸುತ್ತಲೂ ಮರಗಳಲ್ಲಿ ಆಟ ಆಡುತ್ತಾ ಕಾಲ ಕಳೆಯುತ್ತಿದ್ದ ಅಳಿಲುಗಳು, ಉಪಹಾರದ ಸಮಯದಲ್ಲಿ ಯಾರಿಗೋ ಕಾದು ಕುಳಿತಿದ್ದವು, ಯಾರೋ ಒಬ್ಬ ಮಹಾಶಯ ಬಂದು ಮರದ ಪಕ್ಕದಲ್ಲಿನ ಕಾಂಪೌಂಡ್ ಗೋಡೆ ಮೇಲೆ ಅಕ್ಕಿನುಚ್ಚು, ಅನ್ನ, ಖಾರ ಮುಂತಾದ ಆಹಾರ ಪದಾರ್ಥಗಳನ್ನಿಟ್ಟು ಹೋದರು. ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ಅಳಿಲುಗಳು ಚಿಂವ್ ಚಿಂವ್ ಸದ್ದು ಮಾಡುತ್ತಾ ತನ್ನ ಬಂಧು ಬಾಂಧವರಿಗೆ ಕರೆ ನೀಡಿ, ಎಲ್ಲಾ ಬಳಗದವರೊಂದಿಗೆ ತನ್ನ ಪುಟ್ಟ ಬಾಲ ಅಲ್ಲಾಡಿಸುತ್ತಾ ಬಂದು, ಆಹಾರ ಸವಿದು, ಪಕ್ಕದಲ್ಲಿದ್ದ ನೀರನ್ನೂ ಕುಡಿದು, ಸಂತಸದಿಂದ ಪುನಃ ತನ್ನ ಸ್ಥಳಕ್ಕೆ ಹಿಂದಿರುಗಿದವು. ಈ ದೃಶ್ಯ ಸೆರೆಸಿಕ್ಕಿದ್ದು ಕೋಟೆನಾಡಿನ ವಾರ್ತಾ ಇಲಾಖೆ ಕಚೇರಿ ಮುಂಭಾಗ. ಜೋಗಿಮಟ್ಟಿ,

ಮಾ. 20 ಗುಬ್ಬಿ ದಿನ :  ನೀ ಎಲ್ಲಿ ಮರೆಯಾದೆ ಚೀಂವ್ ಚೀಂವ್ ಗುಬ್ಬಚ್ಚಿ

  ಗಾತ್ರದಲ್ಲಿ ಚಿಕ್ಕದಾದ ಜನರ ಮೆಚ್ಚುಗೆ ಗಳಿಸಿದ ಪಕ್ಷಿಯಿದು, ಸದಾ ಗುಂಪು ಗುಂಪಾಗಿ ತನ್ನ ಸಹಚರರೊಂದಿಗೆ ಎಲ್ಲಿ ನೋಡಿದರೂ ಕಣ್ಣಿಗೆ ಬೀಳುವ, ಯಾವಾಗಲೂ ಒಗ್ಗಟ್ಟಿನಿಂದ ಚೀಂವ್ ಚೀಂವ್ ಸದ್ದು ಮಾಡುತ್ತಾ, ಹೆಚ್ಚಾಗಿ ಜನರ ಮಧ್ಯೆಯೇ ಬದುಕುವ ಪುಟ್ಟ ಪಕ್ಷಿಯೇ ಈ ಗುಬ್ಬಚ್ಚಿ. ಈ ಎಲ್ಲಾ ವಿಶೇಷತೆಯಿಂದ ಆಕರ್ಷಿತವಾದ ಗುಬ್ಬಿ ಇಂದು ಅಳಿವಿನಂಚಿನತ್ತ ಸಾಗುತ್ತಿದೆ. ಇದರ ಇರುವಿಕೆ, ಹಾಗೂ ಗುಬ್ಬಚ್ಚಿಯ ಪ್ರಾಮುಖ್ಯತೆ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಿ ದಿನ ಆಚರಿಸಲಾಗುತ್ತಿದೆ. ಇಂದು ಗುಬ್ಬಿಗಳು ಕಣ್ಮರೆಯಾಗುತ್ತಿವೆ. ಊರಿನ ಬೀದಿ ಬೀದಿಯಲ್ಲಿ ಗುಂಪು ಗುಂಪಾಗಿ ಚಿಲಿಪಿಲಿ ಸದ್ದು ಮಾಡುತ್ತ, ಜನರೊಂದಿಗೆ ಬೆರೆಯುತ್ತಿದ್ದ ಗುಬ್ಬಚ್ಚಿಯನ್ನು

ಅಂತರಾಷ್ಟ್ರೀಯ ಮಹಿಳಾ ದಿನದ ವಿಶೇಷ : ಕೋಟೆನಾಡಿನ ವನಿತೆಯರ ಯಶೋಗಾಥೆ

  ಚಿತ್ರದುರ್ಗ:   ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬುದಕ್ಕೆ ಪೂರಕವಾಗಿದ್ದಾರೆ ನಮ್ಮ ಚಿತ್ರದುರ್ಗ ಕೋಟೆ ನಾಡಿನ ವನಿತೆಯರು. ನಾವೆಲ್ಲಾ ಇಂದು ವಿಶ್ವ ಮಹಿಳಾ ದಿನದ ಸಂಭ್ರಮದಲ್ಲಿದ್ದೇವೆ. ಇತ್ತೀಚಿನ ದಿನಮಾನಗಳಲ್ಲಿ ಉದ್ಯಮಶೀಲತೆಯತ್ತ ಮುಖ ಮಾಡುತ್ತಿರುವ ಮಹಿಳೆಯರ ಪ್ರಮಾಣ ಹೆಚ್ಚಾಗುತ್ತಿದೆ. ಲಕ್ಷಾಂತರ ಯುವ ಮಹಿಳಾ ಉದ್ಯಮಿಗಳು ಅವಕಾಶಗಳಿಗೆ ಹೆಬ್ಬಾಗಿಲಾಗಿ ನಿಂತಿದ್ದಾರೆ. ಮನೆಯ ಆರ್ಥಿಕತೆಯಲ್ಲಿ ಸಿಂಹಪಾಲು ಪಡೆದಿದ್ದಾರೆ ಈ ಮಹಿಳೆಯರು. ಮಹಿಳೆಯರನ್ನು ಪ್ರೋತ್ಸಾಹಿಸಲು ಸರ್ಕಾರ ನೀಡಿರುವ ಸಹಾಯ ಪಡೆದುಕೊಂಡು ಉದ್ಯಮ ಎಂಬ ಮಹಾಸಾಗರದಲ್ಲಿ ಈಜಿ ಗೆದ್ದವರು, ಈಜುತ್ತಾ ಹೊರಟವರು ಹಾಗೂ ಮುಳುಗಿ ತೇಲಿ ದಡ ಸೇರಿದ ಓನಕೆ ಓಬ್ಬವನ್ನಾಳಿದ ಚಿತ್ರದುರ್ಗದ ಮಹಿಳೆಯರ ಯಶೋಗಾಥೆಗಳನ್ನು ಮೆಲುಕು ಹಾಕುವುದು ಈ ದಿನದ ವಿಶೇಷ.  

ಸಂಕ್ರಾತಿ ಹಬ್ಬ ಎಲ್ಲೆಲ್ಲಿ ಆಚರಿಸಲಾಗುತ್ತದೆ.!

ಸಂಕ್ರಾತಿ ಹಬ್ಬವನ್ನು ಹಳ್ಳಿಗಳಲ್ಲಿ ಸುಗ್ಗಿಯ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಪೈಕಿ, ಭಾರತದಲ್ಲಿ ಮಕರ ಸಂಕ್ರಾಂತಿ   ಹೆಸರಲ್ಲಿ ಪ್ರತಿ ವರ್ಷಕ್ಕೊಮ್ಮೆ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡುತ್ತಾರೆ.  ಮಕರ ಸಂಕ್ರಾಂತಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನಾನಾ ಕಡೆ ಹಲವು ಹೆಸರುಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಹಬ್ಬವನ್ನು ಕರ್ನಾಟಕದಲ್ಲಿ ಸಂಕ್ರಾಂತಿಯೆಂದೂ, ತಮಿಳುನಾಡಿನಲ್ಲಿ ಪೊಂಗಲ್ ಎಂದೂ, ಪಂಜಾಬ್‌ನಲ್ಲಿ ಲೊಹ್ರಿ ಎಂದೂ, ಗುಜರಾತ್‌ನಲ್ಲಿ ಉತ್ತರಾಯಣ, ಅಸ್ಸಾಂನಲ್ಲಿ ಭೋಗಾಲಿ ಬಿಹು, ಪಶ್ಚಿಮ ಬಂಗಾಳದಲ್ಲಿ ಪೌಶ್ ಸಂಕ್ರಾಂತಿಯೆಂದೂ ಕರೆಯಲಾಗುತ್ತದೆ. ಕ್ಯಾಲೆಂಡರ್ ದಿನಚರಿ ಪ್ರಕಾರ ಹೊಸ ವರ್ಷದ ಮೊದಲ ಹಬ್ಬವೇ ಸಂಕ್ರಾಂತಿ. ಮಕರ ರಾಶಿಗೆ ಸೂರ್ಯ ಪ್ರವೇಶ ಮಾಡುವ ಮೊದಲ ದಿನವನ್ನೇ

ಮಗುವಿಗೆ ತಾಯಿ ಹಾಲು ಶ್ರೇಷ್ಠ ಅಂತ ಹಿರಿಯರು ಏಕೆ ಹೇಳುತ್ತಾರೆ.

ತಾಯಿಯ ಹಾಲು ಮಕ್ಕಳಿಗೆ ಬಹಳ ಮುಖ್ಯವಾದದ್ದು, ಆದ್ರೆ ಇತ್ತೀಚಿನ ದಿನಗಳಲ್ಲಿ  ಹೆಣ್ಣುಮಕ್ಕಳು ತಮ್ಮ ಸೌಂದರ್ಯ ಎಲ್ಲಿ ಹಾಳಾಗುತ್ತೋ ಅನ್ನೋ ಭಯದಿಂದ ಎದೆ ಹಾಲುನ್ನು ಮಕ್ಕಳಿಗೆ ಕೊಡುವುದಿಲ್ಲ.  ಆದ್ರೆ ಶಿಶುಗಳಿಗೆ ಸ್ತನ ಹಾಲು ಸೂಕ್ತ ಪೋಷಣೆಯನ್ನು ಒದಗಿಸುತ್ತದೆ. ಇದು ವಿಟಮಿನ್ಗಳು, ಪ್ರೋಟೀನ್ ಮತ್ತು ಕೊಬ್ಬಿನ ಅಂಶಗಳ ಆಗರ.!.  ತಾಯಿಯ ಎದೆ ಹಾಲ ಶಿಶುವಿಗೆ ಜೀರ್ಣಿಸಿಕೊಳ್ಳಲು ತುಂಬಾ ಸುಲಭ ಹಾಗೂ ಬೆಳವಣಿಗೆಗೆ ಪೂರಕವಾಗಿ ಕೆಲಸಮಾಡುತ್ತದೆ. ತಾಯಿಯ ಹಾಲು ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ವಿರುದ್ಧ ಹೋರಾಡುತ್ತವೆ. ಸ್ತನ್ಯಪಾನ ನಿಮ್ಮ ಮಗುವಿಗೆ ಬರುವ ಅಸ್ತಮಾ ಅಥವಾ ಅಲರ್ಜಿಯನ್ನು ತಡೆಯುತ್ತವೆ ಅಲ್ಲದೆ ಸ್ತನ್ಯಪಾನ ಮಾಡಿಸುವುದರಿಂದ ತಾಯಿ ಮತ್ತು ಮಗುವಿನ ಸಂಬಂಧ ಗಟ್ಟಿಗೊಳ್ಳುತ್ತದೆ. ಕನಿಷ್ಠ ಮಗುವಿಗೆ ಒಂದು ವರೆ

ಅಖಿಲಾ ಪ್ರವೀಣ್ ಅವರಿಗೆ ಆರ್ಯವೈಶ್ಯ ಮಹಾಸಭೆಯ ಜಿಲ್ಲೆಯ ಸಾಧಕಿ ಪ್ರಶಸ್ತಿ

ಚಿತ್ರದುರ್ಗ: ಚಿತ್ರದುರ್ಗ ನಗರದ ಲಿಂಗಂ ಮನೆತನದ  ಅಖಿಲಾ ಪ್ರವೀಣ್ ಅವರಿಗೆ ಕರ್ನಾಟಕ ಆರ್ಯವೈಶ್ಯ ಮಹಾಸಭೆಯು ಚಿತ್ರದುರ್ಗ ಜಿಲ್ಲೆಯ 2018 ರ ಮಹಿಳಾ ಸಾಧಕಿ  ಪ್ರಶಸ್ತಿಯನ್ನು ನೀಡುವುದಾಗಿ ಪ್ರಕಟಿಸಿದೆ ಎಂದು ನಿರ್ದೇಶಕ ಹಾಗೂ ರಾಜ್ಯ ವಾಸವಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಪಿ.ಎಲ್ ಸುರೇಶರಾಜು ತಿಳಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅಖಿಲಾ ಪ್ರವೀಣ್ ಅವರದು ಇನಿದನಿಯ ಗಾಯನಕ್ಕೆ ಮತ್ತೊಂದು ಹೆಸರು. ಚಿತ್ರದುರ್ಗದ ಉದ್ಯಮಿ ಎಲ್.ಆರ್  ಪ್ರಕಾಶಕುಮಾರ್ ಮತ್ತು ಸುಮಾ ಪ್ರಕಾಶ್ ದಂಪತಿಗಳ ಮೊದಲ ಪುತ್ರಿ  ಹಾಗೂ ಕೃಷ್ಣಗಿರಿಯ ಕರೂರು ವೈಶ್ಯ ಬ್ಯಾಂಕಿನ ಮೇನೇಜರ್ ಪ್ರವೀಣ್ ಅವರ ಪತ್ನಿ ಆಗಿರುವ ಅಖಿಲಾ ವಾಸವಿ ಮೆಲೋಡೀಸ್

ಮಳೆ ಎಂದಾಕ್ಷಣ ನೆನಪಾಗುವ ಮೊದಲ ನೆನಪು

ಮಳೆ ಎಂದರೆ ಪ್ರತಿಯೊಬ್ಬರ ಹದಿಹರೆಯದ ಜೀವನದಲ್ಲಿ ಮರೆಯಾಗದ ನೆನಪೊಂದು ಕಾಡುತ್ತಿರುತ್ತೆ, ಅಂತಹ ನೆನಪು ಮಳೆ ಬಂದಾಗೆಲ್ಲಾ ನನಗೆ ಕಾಡುತ್ತಿರುತ್ತೆ. ನನಗೂ ಮಳೆ ಎಂದಾಕ್ಷಣ ನನಗೆ ತಟ್ಟನೆ ನೆನಪಾಗುವ ನೆನಪೆಂದರೆ ನಾನು ಎಮ್‌ಎ ಪದವಿಯನ್ನು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಾಡಲು ನಿರ್ಧರಿಸಿ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಕೊನೆಗು ಅದೇ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ವಿಭಾಗದಲ್ಲಿ ಸೀಟನ್ನು ಪಡೆದುಕೊಂಡೆ. ಆಗಷ್ಟ್ ತಿಂಗಳ ಮೊದಲವಾರ ನಮ್ಮ ಕ್ಲಾಸ್ ಆರಂಭವಾಗುತ್ತಿವೆ ಎಂದು ಗೊತ್ತಾಯಿತು, ಆದರೂ ಸ್ವಲ್ಪ ಭಯಯು ನನ್ನಲ್ಲಿ ಕಾಡುತಿತ್ತು ಅದು ಏಕೆ ಎಂದರೆ ನಾನು ಬಿಎ ಪದವಿಯನ್ನು ರಾಣೆಬೆನ್ನೂರಿನಲ್ಲಿ ಲೇಡಿಸ್ ಕಾಲೇಜಿನಲ್ಲಿ ಮುಗಿಸಿದ್ದರಿಂದ ಓಮ್ಮೆಲೆ ಬೇರೊಂದು ಕಾಲೇಜಿಗೆ ಹೋಗಿ ಹೇಗೆ ಹೊಂದಿಕೊಳ್ಳುವುದು ಅಲ್ಲಿ ಬಾಯ್ಸ್

ದುರ್ಗದ ಗೃಹಿಣಿ  ಪಿ.ಗಂಗಾ ಅವರು ಬಜೆಟ್ ಬಗ್ಗೆ ಹೇಳಿದ್ದೇನು.?

ನೂತನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಾರಥ್ಯದಲ್ಲಿ ಕರ್ನಾಟಕ ರಾಜ್ಯ 2018 ಬಜೆಟ್ ಸಂಪನ್ಮೂಲ ಕ್ರೂಢೀಕರಣ ಆರ್ಥಿಕ ನಿರ್ಬಂಧಿತ ಬಜೆಟ್ ಮಂಡನೆ ಇದಾಗಿದೆ. ಸರ್ಕಾರಿ ಶಾಲೆಯಲ್ಲಿ ಬಯೋಮೆಟ್ರಿಕ್ ಯಂತ್ರ ಕಡ್ಡಾಯಗೊಳಿಸುವ ಮೂಲಕ ಸರ್ಕಾರಿ ಶಾಲೆಗಳ ಆಧುನೀಕರಣದತ್ತ ದಾವು ಗೋಲು ಹಾಕಲಾಗಿದೆ ಇದೊಂದು ಸ್ವಾಗತರ್ಹವಾದ ಸಂಗತಿಯಾಗಿದೆ. ಅಂತೆಯೇ ರೈತರ ನಿರೀಷೆಯಲ್ಲಿದ್ದ ಸಾಲಮನ್ನಾ ಕುರಿತಾಗಿ 31-12-2017 ರ ಗಳಗಾಗಿ ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್‍ಗಳಲ್ಲಿ ರೈತರ 2 ಲಕ್ಷಗಳ ಸುಸ್ತಿರ ಸಾಲಮನ್ನಾ ಗರಿಷ್ಠ ರೂ 25,000=00 ಗಳ ರೈತರ ಖಾತೆಗೆ ತುಂಬಲಿರುವ ಸರ್ಕಾರ ಕ್ರಮ ರೈತರಲ್ಲಿ ಸಂತಸತಂದಿದೆ, ಹಾಗೂ ಕಳೆದ 3 ವರ್ಷ ಆದಾಯ ತೆರಿಗೆ ಪಾವತಿಸಿರುವ ರೈತರ ಸಾಲ ಮಾನ್ನಾ ಹರ್ಷದಾಯಕವಾಗಿದೆ.”ಕಾಯಕ”

ಅಜ್ಜನ ಛತ್ರಿ ನನಗೆ ಬೇಡ…

  ಕೊಡೆ ಅಂದ ತಕ್ಷಣ ನೆನಪಾಗುವುದು ನನ್ನ ಅಜ್ಜನ ದೊಡ್ಡ ಕಪ್ಪನೆಯ ದೊಡ್ಡ ಕೊಡೆ. ಬಿಸಿಲಿರಲಿ, ಮಳೆಯಿರಲಿ ಅಜ್ಜ ಹೊರಗೆ ಹೊರಟನೆಂದರೆ ಕೊಡೆಯ ಸಾಥ್ ಇದ್ದೇ ಇರುತ್ತಿತ್ತು. ಮನೆಯಲ್ಲಿ ಆ ಕೊಡೆ ನೇತು ಹಾಕಲು ನಿರ್ದಿಷ್ಟವಾದ ಸ್ಥಳದಲ್ಲಿ ಗೋಡೆಯ ಮೇಲೆ ಹೊಡೆದಿದ್ದ ಒಂದು ಮೊಳೆ ಅದಕ್ಕೆಂದೇ ಮೀಸಲಾಗಿತ್ತು. ಆ ಕೊಡೆ ಮಳೆ, ಬಿಸಿಲಿಗೆ ಅಜ್ಜನ ತಲೆ ಮೇಲೇರಿದರೆ ಉಳಿದ ಸಮಯದಲ್ಲಿ ಅಜ್ಜನ ಊರುಗೋಲಾಗಿರುತ್ತಿತ್ತು. ಚಿಕ್ಕವರಿದ್ದಾಗ ಹತ್ತಿರದ ಸರ್ಕಾರಿ ಶಾಲೆ ಬಿಟ್ಟು ಇಂಗ್ಲೀಷ್ ಮೀಡಿಯಮ್ ಶಾಲೆಗೆಂದು ದೂರದ ಶಾಲೆಗೆ ಸೇರಿದ ಮೇಲೆ ನಮಗೂ ಕೊಡೆ ತೆಗೆದುಕೊಂಡು ಹೋಗುವುದು ಅನಿವಾರ್ಯವಾಗಿತ್ತು. ಆಗ ಅಪ್ಪ ಅಜ್ಜನ ಕೊಡೆಯ ತರಹದ ಉದ್ದನೆಯ ಎರಡು ಕೊಡೆಗಳನ್ನು

ಮತಗಟ್ಟೆಯಲ್ಲಿ ಮಹಿಳೆಯರಿಗೆ ಕನಿಷ್ಠ ಸೌಲಭ್ಯ ಒದಗಿಸಿ

ವಿಧಾನ ಸಭಾ ಚುನಾವಣೆಯಲ್ಲಿ ಸರ್ಕಾರಿ ನೌಕರರನ್ನು ಕರ್ತವ್ಯಕ್ಕೆ ನೇಮಿಸುವುದು ಸರ್ವೆ ಸಾಮಾನ್ಯ. ಆದರೆ ಚುನಾವಣೆಯ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಲು ಕೆಲವು ಮಹಿಳೆಯರು ಹಿಂಜರೆಯುತ್ತಾರೆ. ಹೆದರಿಕೆಯಿಂದ ನಡುಗುತ್ತಾರೆ. ಕಾರಣವಿಷ್ಟೆ. ಮಹಿಳೆಯರು ಕರ್ತವ್ಯ ನಿರ್ವಹಿಸುವ ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲದಿರುವುದು. ಪ್ರತಿ ಮತಗಟ್ಟೆಗಳಲ್ಲಿ ಕನಿಷ್ಠ ಇಬ್ಬರು ಮಹಿಳೆಯರನ್ನು ನೇಮಿಸುವುದು. ಸಾಮಾನ್ಯವಾಗಿ ಮತಗಟ್ಟೆಗಳನ್ನು ಶಾಲಾ ಕಟ್ಟಡಗಳಲ್ಲಿ ಏರ್ಪಡಿಸಿರುತ್ತಾರೆ. ಹಲವು ಶಾಲೆಗಳಲ್ಲಿ ಶೌಚಾಲಯವಿಲ್ಲದಿರುವುದು, ನೀರಿನ ಸೌಲಭ್ಯವು ಇರುವುದಿಲ್ಲ. ಶೌಚಾಲಯವಿದ್ದರೂ ಬಾಗಿಲುಗಳು ಮುರಿದಿರುವುದು. ಇದರಿಂದ ಕರ್ತವ್ಯ ನಿರ್ವಹಿಸಲು ಬಂದ ಮಹಿಳೆಯರಿಗೆ ಹೇಳಿಕೊಳ್ಳಲಾರದಷ್ಟು ಕಷ್ಟವಾಗುತ್ತದೆ. ಕರ್ತವ್ಯ ನಿರ್ವಹಿಸುವ ಹಿಂದಿನ ರಾತ್ರಿ ಶಾಲೆಗಳಲ್ಲೇ ಮಲಗಬೇಕಾಗುತ್ತದೆ. ಆ ಶಾಲೆಗಳಲ್ಲಿ ಭದ್ರವಾದ ಬಾಗಿಲುಗಳು , ಕಿಟಕಿಗಳು ಇಲ್ಲದಿರುವುದು, ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದು.