ರಾಜ್ಯ

ಗ್ರಾ.ಪಂ.ಚುನಾವಣೆ ದಿನಾಂಕ ಫಿಕ್ಸ್.!

ಬೆಂಗಳೂರು:ಹೈಕೋರ್ಟ್ ನಿರ್ದೇಶನದಂತೆ ರಾಜ್ಯದ 5764 ಗ್ರಾ.ಪಂ.ಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಕೊರೋನಾ ಸೋಂಕಿನ ಭೀತಿಯ ಹಿನ್ನಲೆ ಒಂದು ಸಾವಿರ ಮತದಾರರಿಗೆ ಒಂದು ಮತಗಟ್ಟೆ ಸ್ಥಾಪಿಸಿ ಎಂದು ಹೇಳಿದೆ. ಡಿ.22ರಂದು ಮೊದಲನೇ ಹಂತ, ಎರಡನೇ ಹಂತದಲ್ಲಿ ಡಿ.27ರಂದು ಚುನಾವಣೆ ನಡೆಯಲಿವೆ. ಇನ್ನು ಡಿ.30 ಫಲಿತಾಂಶ ಹೊರ ಬೀಳುವ ಮೂಲಕ ಗ್ರಾಮಗಳ ಮತ ಸಮರಕ್ಕೆ ತೆರೆಬೀಳಲಿದೆ. ಮೊದಲ ಹಂತದ ಚುನಾವಣೆಗೆ ಡಿ.7ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಪಾದಯಾತ್ರೆಯಿಂದ ಬೆಂಗಳೂರಿಗೆ ಹೊರಡಲು ಸ್ವಾಮೀಜಿ ರೆಡಿ ಆಗಿದ್ದು ಏಕೆ.?

ಬಾಗಲಕೋಟೆ; ಕುರುಬರನ್ನು ಎಸ್ಟಿಗೆ ಸೇರಿಸಲು ಒತ್ತಾಯಿಸಿ ಜ.15ರಿಂದ ಫೆ.7ರವರೆಗೆ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಭಾನುವಾರ ಕುರುಬರ ಎಸ್ಟಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿ, ಫೆ.7ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, 10 ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ. ನಮ್ಮ ಹೋರಾಟ ಎಸ್‌ಟಿ ಮೀಸಲಾತಿಗಾಗಿ, ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ ಎಂದರು.

ನಿಮ್ಮ ಎಲ್ ಪಿಜಿ ಗ್ಯಾಸ್ ಮೇಲಿನ ಸಬ್ಸಿಡಿ ಹಣ ಎಷ್ಟು ಬಂತು ಎಂಬುದರ ಬಗ್ಗೆ ಮಾಹಿತಿ ಬೇಕಾ.?

ನವದೆಹಲಿ : ಹಾಗಾದರೆ ಹೀಗೆ ಮಾಡಿ. ಎಷ್ಟು ಸಬ್ಸಿಡಿ ಮೊತ್ತವನ್ನ ತಮ್ಮ ಖಾತೆಯಲ್ಲಿ ಜಮಾ ಮಾಡಲಾಗಿದೆ ಮತ್ತು ಅದನ್ನ ತಿಳಿದುಕೊಳ್ಳೋದು ಹೇಗೆ ಅನ್ನೋದು ಕಾತುರತೆ ಇರುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಸಬ್ಸಿಡಿ ಹಣ ಜಮಾ ಆಗಿದೆ ಎಂಬುದನ್ನ ಗ್ರಾಹಕರು ಸುಲಭವಾಗಿ ತಿಳಿದುಕೊಳ್ಳಬಹುದು. 1ಮೊದಲು ಅಧಿಕೃತ ವೆಬ್ಸೈಟ್ Mylpg.in‌ ಗೆ ಭೇಟಿ ನೀಡಿ. 2 ನಿಮ್ಮ ಸಿಲಿಂಡರ್ ಕಂಪನಿಯ ಮೇಲೆ (HP, India and Indane) 3 ನೀವು ಅದರಲ್ಲಿ ಹೊಸ ಇಂಟರ್ಫೇಸ್ ಅನ್ನ ತೆರೆಯುತ್ತೀರಿ. ಮೆನುಗೆ ಹೋಗಿ. 4ನಿಮ್ಮ 17 ಅಂಕಿಗಳ LPG IDಯನ್ನ ನಮೂದಿಸಿ 5LPG ID ಗೊತ್ತಿಲ್ಲದಿದ್ದರೆ, ‘ನಿಮ್ಮ LPG ID ತಿಳಿಯಲು ಇಲ್ಲಿ

ಪಡಿತರ ಚೀಟಿದಾರರಿಗೆ ಬಿಗ್ ಶಾಕ್ ಏನು ಗೊತ್ತಾ.?

ಬೆಂಗಳೂರು : ಕೇಂದ್ರ ಸರ್ಕಾರವು ಪಡಿತರ ಚೀಟಿದಾರರಿಗೆ ಬಿಗ್ ಶಾಕ್ ನೀಡಿದ್ದು, ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆಯಡಿ ಕಳೆದ ಏಳು ತಿಂಗಳಿನಿಂದ ಪಡಿತರ ಚೀಟಿದಾರರಿಗೆ ನೀಡುತ್ತಿದ್ದ ಉಚಿತ ಅಕ್ಕಿ ನವೆಂಬರ್ 30 ಕ್ಕೆ ಅಂತ್ಯಗೊಳ್ಳಲಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಳೆದ ಏಪ್ರಿಲ್ ನಿಂದ ಪಡಿತರ ಚೀಟಿ ಹೊಂದಿರುವ ರಾಜ್ಯದ ಎಲ್ಲ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿ ಮತ್ತು ಕಟುಂಬವೊಂದಕ್ಕೆ 1 ಕೆಜಿ ಕಡಲೆಕಾಳನ್ನು ಹಂಚಿಕೆ ಮಾಡಿತ್ತು. ಹಾಗಾಗಿ ರಾಜ್ಯದ ಪಡಿತರ ಚೀಟಿ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ಮತ್ತು ಕುಟುಂಬವೊಂದಕ್ಕೆ ತಲಾ 2 ಕೆಜಿ ಗೋಧಿ, 1 ಕೆಜಿ ಕಡಲೆಕಾಳು ಲಭ್ಯವಾಗುತ್ತಿತ್ತು.

ಇಂದಿನ ರಾಶಿ ಭವಿಷ್ಯ ನೋಡಿ ( 30 ನವೆಂಬರ್ , 2020) ಸೋಮವಾರ(ಹುಣ್ಣಿಮೆ -ಚಂದ್ರಗ್ರಹಣ)

ಹುಣ್ಣಿಮೆ= ಆರಂಭ ನೆನ್ನೆ – 12:49 PM, ಕೊನೆ – 3:01 PM.ಚಂದ್ರಗ್ರಹಣ( ರೋಹಿಣಿ ನಕ್ಷತ್ರ ) = ಸ್ವರ್ಷಕಾಲ -1:04 PMಮೋಕ್ಷಕಾಲ – 5:22 PM ಸೂರ್ಯೋದಯ = 6:41 AMಸೂರ್ಯಾಸ್ತ = 5:56 PM ಶುದ್ಧ ಕೊಳ್ಳೇಗಾಲದ ವಂಶಪಾರಂಪರಿಕ ಜ್ಯೋತಿಷ್ಯರುಶ್ರೀ ಚೌಡೇಶ್ವರಿ ದೇವಿ,ರಕ್ತೇಶ್ವರಿ, ಸ್ಮಶಾನಕಾಳಿ ಆರಾಧಕರು 🧘‍♂️ಪ್ರಧಾನ ಗುರುಗಳು ಪಂಡಿತ್: ಶ್ರೀ 🙏ಮೋಡಿ ಕೃಷ್ಣ ಮೂರ್ತಿ, ರಾಜ್ಯ ಹಾಗೂ ಹೊರರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಿರುವ ಏಕೈಕ ಮಾಂತ್ರಿಕರು ಸಮಸ್ಯೆ ನಿಮ್ಮದು‌ ಪರಿಹಾರ ನಮ್ಮದುನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ವಿವಾಹ ವಿಳಂಬ , ಮಾಟ ಮಂತ್ರ, ಶತ್ರುನಾಶ, ಸ್ತ್ರೀ-ವಶೀಕರಣ, ಪುರುಷ-ವಶೀಕರಣ,ಅತ್ತೆ-ಸೊಸೆ ಕಿರಿಕಿರಿ, ಸಂತಾನ ಭಾಗ್ಯ, ವ್ಯಾಪಾರ

ಮಠ ಮಾನ್ಯಗಳು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ: ಯಡಿಯೂರಪ್ಪ

ಮಠ ಮಾನ್ಯಗಳು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ: ಯಡಿಯೂರಪ್ಪ ಚಿತ್ರದುರ್ಗ: ಮಠ ಮಾನ್ಯಗಳು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಮುರುಘಾಶ್ರೀ ಮ್ಯೂಸಿಯಂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಅನುಭವಮಂಟಪ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ.ಮುರುಘಾಮಠ ಜಾತ್ಯಾತೀತ ಮಠವಾಗಿಸಿದ ಹಿರಿಮೆ ಮುರುಘಾಶ್ರೀಗಳದ್ದು ಎಂದರು. ಸಂಪುಟ ಪುನಾರಚನೆ ಬಗ್ಗೆ ಮಾತನಾಡಿದ ಅವರು, ಎರಡು ಮೂರು ದಿನಗಳಲ್ಲಿ ಆಗುವ ವಿಶ್ವಾಸವಿದೆ. ಸಾಧ್ಯವಾದ್ರೆ ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ ಎಂದರು.ಬೇರೆ ಯಾವುದೇ ಗೊಂದಲವಿಲ್ಲ, ಎಲ್ಲವೂ ಸರಿ ಹೋಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ದಕ್ಷಿಣ ಭಾರತದಲ್ಲಿ ಮತ್ತೆ ಮಳೆ: ಹವಾಮಾನ ಇಲಾಖೆ.!

ಬೆಂಗಳೂರು: ನಿವಾರ್ ಚಂಡಮಾರುತದ ಬೆನ್ನಲ್ಲೇ ಮತ್ತೊಂದು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಶನಿವಾರ ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ದುರ್ಬಲಗೊಂಡಿದ್ದ ನಿವಾರ್ ಚಂಡಮಾರುತ ಮತ್ತೆ ಬಲಗೊಳ್ಳುತ್ತಿದ್ದು, ವಾಯುಭಾರ ಕುಸಿತವಾಗುವ ಸಾಧ್ಯತೆಗಳಿವೆ. ಇದರಿಂದ ಡಿಸೆಂಬರ್ 1ರಿಂದ ಮತ್ತೆ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಟ್ವೀಟ್ ಮಾಡಿದೆ. ನಿವಾರ್ ಚಂಡಮಾರುತದ ಬೆನ್ನಲ್ಲೇ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳಿದ್ದು, ಇದರ ಪ್ರಭಾವದಿಂದ, ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಮಹೇ, ಲಕ್ಷದ್ವೀಪ, ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ದಕ್ಷಿಣ ರಾಯಲಸೀಮಗಳಲ್ಲಿ ಮಂಗಳವಾರ ಮತ್ತು ಬುಧವಾರ ವ್ಯಾಪಕ

ದ್ವಿಚಕ್ರ ವಾಹನ ಸವಾರರೆ ಈ ಸುದ್ದಿ ಗಮನಿಸಿ

ನವದೆಹಲಿ : ದ್ವಿಚಕ್ರ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮಹತ್ವದ ಸೂಚನೆಯೊಂದನ್ನು ನೀಡಿದ್ದು, 2021 ರ ಜೂ.1 ರಿಂದ ದೇಶಾದ್ಯಂತ ಭಾರತೀಯ ಗುಣಮಟ್ಟ ಮಾನಕ ಸಂಸ್ಥೆ (BIS) ಹೆಲ್ಮೆಟ್ ಗಳನ್ನೇ ದ್ವಿಚಕ್ರ ವಾಹನ ಸವಾರರು ಬಳಕೆ ಮಾಡಬೇಕು ಎಂದು ಹೇಳಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು, ಬಿಐಎಸ್ ಪ್ರಮಾಣಿತ ಹೆಲ್ಮೆಟ್ ಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದು ಆದೇಶ ಹೊರಡಿಸಿದ್ದು, ಜೂನ್ 1 ರಿಂದ ದ್ವಿಚಕ್ರ ವಾಹನ ಸವಾರರು ಬಿಐಎಸ್ ಹೆಲ್ಮೆಟ್ ಗಳನ್ನು ಧರಿಸುವುದು ಕಡ್ಡಾಯ ಎಂದು ಹೇಳಿದೆ. ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುವುದರಿಂದ ರಸ್ತೆ ಅಪಘಾತದಲ್ಲಿ ಸವಾರರು ಸಾವನ್ನಪ್ಪುತ್ತಿರುವುದು ಹೆಚ್ಚಾಗುತ್ತಿದೆ. ಹೀಗಾಗಿ ಈ ಕ್ರಮ

ಸಿರಿಧಾನ್ಯ ಬೆಳೆಯುವ ರೈತರಿಗೆ ಬ್ಯಾಡ್ ನ್ಯೂಸ್

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಬಿಗ್ ಶಾಕ್ ನೀಡಿದ್ದು, ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹಧನವನ್ನು ನಿಲ್ಲಿಸಲಾಗಿದೆ. ಹೌದು, ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರ 3 ವರ್ಷದಿಂದ ರೈತ ಸಿರಿ ಹೆಸರಿನಲ್ಲಿ ನೀಡುತ್ತಿದ್ದ ಪ್ರೋತ್ಸಾಹಧನವನ್ನು ಸ್ಥಗಿತಗೊಳಿಸಿದೆ. ಒಂದು ಹೆಕ್ಟೇರ್ ನಲ್ಲಿ ಸಿರಿಧಾನ್ಯ ಬೆಳೆದರೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದ್ದ ಸರ್ಕಾರ ಈ ವರ್ಷ ಅರ್ಜಿ ಪಡೆಯದೆ ಪ್ರೋತ್ಸಾಹಧನ ನಿಲ್ಲಿಸಿದೆ.

ರಾಜ್ಯ ನೌಕರರಿಗೆ ಕೇಂದ್ರ ಮಾದರಿ ವೇತನಕ್ಕೆ ಹೋರಾಟ: ಸಿ.ಎಸ್.ಷಡಾಕ್ಷರಿ

ಚಿತ್ರದುರ್ಗ: ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಕೊಟ್ಟೆ ಕೊಡಿಸುತ್ತೇನೆ. ಯಾವುದೇ ಕಾರಣಕ್ಕೂ ಪಲಾಯನ ಮಾಡುವುದಿಲ್ಲ. ಪ್ರಬಲವಾದ ಹಕ್ಕೊತ್ತಾಯವನ್ನು ಸರ್ಕಾರದ ಮುಂದಿಡಲಾಗುವುದು. ಯಾವುದೇ ಪಕ್ಷಗಳ ಜೊತೆ ರಾಜಿ, ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲವೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸರ್ಕಾರಿ ನೌಕರರಿಗೆ ವಾಗ್ದಾನ ಮಾಡಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ ಮುರುಘಾಮಠದ ಅನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸರ್ಕಾರಿ ನೌಕರರ ಮತ್ತು ಶಿಕ್ಷಕರುಗಳು ನೇರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎನ್.ಪಿ.ಎಸ್.ಹಠಾವೋ, ನೌಕರರ ಬಚಾವೋ ನಮ್ಮ ಮುಂದಿರುವ ಬಹುದೊಡ್ಡ ಬೇಡಿಕೆ. ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ