ಜ್ಞಾನ-ವಿಜ್ಞಾನ

ಸೂರ್ಯ ಗ್ರಹಣ ಎಲ್ಲೆಲ್ಲಿ ಕಾಣಿಸುತ್ತೆ ಗೊತ್ತಾ.?

ಬೆಂಗಳೂರು: ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣವು ಬೆಳಗ್ಗೆ 5 ಗಂಟೆಯಿಂದ 9.18ರವರೆಗೆ ನಡೆಯಲಿದೆ. ಈ ವರ್ಷದ ಮೊದಲ ಭಾಗಶಃ ಸೂರ್ಯ ಗ್ರಹಣ ಆರಂಭವಾಗಿದೆ. ಆದರೆ ಈ ಗ್ರಹಣ ಭಾರತದಲ್ಲಿ ಕಾಣಿಸುವುದಿಲ್ಲ. ಈ ಗ್ರಹಣವು ಏಷ್ಯಾ ಖಂಡದ ಈಶಾನ್ಯ ಭಾಗವಾದ ಸೈಬಿರಿಯಾ, ಮಂಗೋಲಿಯಾ ಹಾಗೂ ಉತ್ತರ ಪೆಸಿಫಿಕ್ ಭಾಗಗಳಾದ ಈಶಾನ್ಯ ಚೀನಾ, ಜಪಾನ್ ಹಾಗೂ ಕೋರಿಯಾ ದೇಶಗಳಲ್ಲಿ  ಕಾಣಿಸಿಕೊಳ್ಳಲಿದೆಯಂತೆ

ಬೆಳ್ಳಂ ಬೆಳಗೆ ಒಟ್ಟು 17 ಕಡೆಗಳಲ್ಲಿ ಎಸಿಬಿ ದಾಳಿ..!

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಐವರು ಸರ್ಕಾರಿ ಅಧಿಕಾರಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಶಾಕ್ ನೀಡಿರುವ ಭ್ರಷ್ಟಾಚಾರ ವಿರೋಧಿ ದಳದ ಅಧಿಕಾರಿಗಳು ಏಕಕಾಲಕ್ಕೆ ರೇಡ್ ಮಾಡಿದ್ದಾರೆ. ಏಕಕಾಲಕ್ಕೆ ಒಟ್ಟು 17 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರು, ಚಿಂತಾಮಣಿ, ಮೈಸೂರು, ಹುಣಸೂರು, ಉಡುಪಿ, ದಾವಣಗೆರೆ, ಚಿಕ್ಕಮಗಳೂರು , ಮಂಗಳೂರು ಮತ್ತು ಕಾರವಾರಗಳಲ್ಲಿ ದಾಳಿಗಳು ನಡೆದಿವೆ ಹೆಚ್ಚಿನ ಮಾಹಿತಿ ಇಂದು ಸಂಜೆವೇಳೆಗೆ ಮಾಹಿತಿ ಸಿಗಲಿದೆ.

ದಿ. ಅನಂತಕುಮಾರ ಬಗ್ಗೆ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು.?

ಚಿತ್ರದುರ್ಗ: ಎಲ್ಲಾ ಜಾತಿಯವರನ್ನು ಬಿಜೆಪಿ.ಗೆ ಕರೆ ತಂದು ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ದೊಡ್ಡ ಶಕ್ತಿ ಅನಂತಕುಮಾರ್‌ರವರನ್ನು ಕಳೆದುಕೊಂಡಿದ್ದೇವೆ. ಪಕ್ಷ ಸಂಘಟನೆಗಾಗಿ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗಬೇಕಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕರೆ ಕೊಟ್ಟರು. ಅನಂತಕುಮಾರ್‌ರವರ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕರ್ತರೊಡನೆ ಕಾರ್ಯಕರ್ತರಾಗಿ, ನಾಯಕರ ಜೊತೆ ನಾಯಕರಾಗಿ ಎಲ್ಲರ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಂಘಟನಾ ಚತುರರಾಗಿದ್ದ ಅನಂತಕುಮಾರ್ ಚುನಾವಣೆಯಲ್ಲಿ ಠೇವಣಿ ಸಿಗುವುದಿಲ್ಲ ಎನ್ನುವುದು ಗೊತ್ತಿದ್ದರೂ ಸ್ಪರ್ಧಿಸುವ ಧೈರ್ಯ ಮಾಡುತ್ತಿದ್ದರು. ಕೇವಲ ಗ್ರಾ.ಪಂ.ಚುನಾವಣೆಗೆ ನಿಂತು ಗೆಲ್ಲುವುದು ಕಷ್ಟವಾಗಿರುವ ಇಂದಿನ ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಅನಂತಕುಮಾರ್ ಸತತವಾಗಿ ಆರು ಬಾರಿ ಸಂಸದರಾಗಿದ್ದರೆಂದರೆ ಅವರಲ್ಲಿದ್ದ ನಾಯಕತ್ವದ ಗುಣವೇ ಸಾಕ್ಷಿ ಎಂದು

ರೈತರ ಪತ್ರಿಭಟನೆ ವಾಪಾಸ್ಸು: ಸರಕಾರಕ್ಕೆ 15 ದಿನ ಗಡುವು.!

  ಬೆಂಗಳೂರು: ರಾಜ್ಯದ ಕಬ್ಬು ಬೆಳೆಗಾರರು ನಿನ್ನೆಯಿಂದ ಸರ್ಕಾರದ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದು 15 ದಿನ ಕಾಲವಕಾಶ ನೀಡಲಾಗಿದೆ ಎಂದು ರೈತ ಮುಖಂಡರು ಹೇಳಿದ್ದಾರೆ. ಆ ಬಳಿಕವೂ ಕೂಡ ಸರ್ಕಾರ ನಮ್ಮ ಸಮಸ್ಯೆ ಬಗ್ಗೆ ಉದಾಸೀನತೆ ಅಥವಾ ಅಗೌರವ ತೋರಿದಲ್ಲಿ ಪ್ರತಿಭಟನೆ ಬಗ್ಗೆ ರೂಪುರೇಷೆ ರೂಪಿಸುವ ಮೂಲಕ ಸರ್ಕಾರಕ್ಕೆ ಮತ್ತೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಹೇಳಿದ್ದಾರೆ.

ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪಕ್ಷ ಬಿಡಲ್ವಂತೆ.!

  ಬೆಂಗಳೂರು: ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಾವು ಬಿಜೆಪಿ ತೊರೆದು ಮತ್ತೊಂದು ಪಕ್ಷ ಸೇರುವುದಾಗಿ ಕೇಳಿಬರುತ್ತಿರುವುದು ವದಂತಿ ಸುಳ್ಳಯಎಂದು ಹೇಳಿದ್ದಾರೆ. ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡುವ ಮೂಲಕ ಗೆಲುವಿಗೆ ಸಹಕಾರ ನೀಡಿದೆ ಹಾಗೂ ಹಿರಿಯೂರು ಕ್ಷೇತ್ರದ ಮತದಾರರು ಮತನೀಡಿದ್ದಾರೆ ನಿರಾಸೆ ಮಾಡಲಾರೆ ಎಂದು ಹೇಳಿದ್ದಾರೆ.  

ವಿಜ್ಞಾನ-ತಂತ್ರಜ್ಞಾನ ವೇಗ: ಅಂಧಶ್ರದ್ದೆಯೂ ಅಷ್ಟೇ ವೇಗ: ಜಿ.ಯಾದವರೆಡ್ಡಿ.!

ಚಿತ್ರದುರ್ಗ: ವಿಜ್ಞಾನ-ತಂತ್ರಜ್ಞಾನ ವೇಗವಾಗಿ ಬೆಳೆದಂತೆ ಅಂಧಶ್ರದ್ದೆಯೂ ಅಷ್ಟೆ ವೇಗವಾಗಿ ಬೆಳೆಯುತ್ತಿರುವುದರಿಂದ ಸಮಾಜದಲ್ಲಿ ತಾಕಲಾಟ ಏರ್ಪಟ್ಟಿದೆ ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಸದಸ್ಯ ಜೆ.ಯಾದವರೆಡ್ಡಿ ಹೇಳಿದರು. ಕಾಲೇಜು ಶಿಕ್ಷಣ ಇಲಾಖೆ, ಯುವ ರೆಡ್‌ಕ್ರಾಸ್ ಘಟಕ ಹಾಗೂ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಸಮಿತಿಯಿಂದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ನಡೆದ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಾಕ್ಷರತೆ ಪ್ರಮಾಣ ಜಾಸ್ತಿಯಾಗಿದೆ. ಜೊತೆ ಜೊತೆಯಲ್ಲಿ ವೈಚಾರಿಕತೆ ಕಡಿಮೆಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ವಿದ್ಯಾವಂತರೆ ಮೂಡನಂಬಿಕೆಗಳಿಗೆ ಹೆಚ್ಚು ಮಾರು ಹೋಗುತ್ತಿದ್ದಾರೆ. ವೈಜ್ಞಾನಿಕವಾಗಿ ಮುಕ್ತ ಮನಸ್ಸನ್ನು ಹೊಂದಿದಾಗ ಮಾತ್ರ ಅಂಧಶ್ರದ್ದೆ, ಮೂಢನಂಬಿಕೆಯಿಂದ ಹೊರಬರಲು ಸಾಧ್ಯ. ವಿಶೇಷವಾಗಿ ವಿದ್ಯಾರ್ಥಿಗಳು ಯಾವುದನ್ನಾದರೂ ಪ್ರಶ್ನಿಸದೆ ಒಪ್ಪಿಕೊಳ್ಳಬಾರದು ಎಂದು

ಶತಮಾನದ ವಿಶೇಷ ಚಂದ್ರ ಗ್ರಹಣದಿಂದ ಏನು ತೊಂದರೆ ಆಗಲ್ಲ: ಎಚ್ ಎಸ್ ಟಿ ಸ್ವಾಮಿ ಏನು ಹೇಳಿದ್ದಾರೆ.?

ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳು ಬಾಹ್ಯಾಕಾಶದಲ್ಲಿ ನಡೆಯುವ ವಿಸ್ಮಯಗಳು. ಈ ರೀತಿಯ ಘಟನೆಗಳು ಬಾಹ್ಯಾಕಾಶ ವಿಜ್ಞಾನ ಮತ್ತು ಆಕಾಶಕಾಯಗಳ ಚಲನೆಯನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಅವಕಾಶ ಮಾಡಿಕೊಡುತ್ತವೆ. ಭಾರತೀಯ ಪರಂಪರೆಯಲ್ಲಿ ಆರ್ಯಭಟ, ವರಾಹಮಿಹಿರ, ಭಾಸ್ಕರ ಇವರೆಲ್ಲರೂ ನಮ್ಮ ಪ್ರಾಚೀನ ಭಾರತದ ಮತ್ತು ಖಗೋಳ ವಿಜ್ಞಾನದ ಬಗ್ಗೆ ಚಿಂತಿಸಿದ ಮಹಾನ್ ಖಗೋಳ ತಜ್ಞರು. ಅವರೆಲ್ಲರೂ ವಿವರಿಸಿರುವ ಹಾಗೆ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದು, ಇವೆಲ್ಲವೂ ಒಂದೇ ಸಮತಳದಲ್ಲಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಚಂದ್ರ ಕೆಲವು ನಿಮಿಷ, ಕೆಲವು ಗಂಟೆಗಳ ಕಾಲ ನಮಗೆ ಕಾಣುವುದಿಲ್ಲ. ಇದನ್ನೇ  ನಾವು ಚಂದ್ರಗ್ರಹಣ ಎಂದು ಕರೆಯುತ್ತೇವೆ. ಅದರೂ ಸಹಾ ನಮ್ಮ ಜನ

ಜಿಲ್ಲೆಯ ಹೆಚ್.ಡಿ.ಪುರದಲ್ಲಿ 30 ಮಿ.ಮೀ ಮಳೆ

ಚಿತ್ರದುರ್ಗ:ಚಿತ್ರದುರ್ಗದಲ್ಲಿ ಜುಲೈ 11 ರಂದು ಆದ ಮಳೆ ವರದಿಯನ್ವಯ ಜಿಲ್ಲೆಯ ಹೊಳಲ್ಕೆರೆ ತಾ: ಹೆಚ್.ಡಿ.ಪುರದಲ್ಲಿ 30 ಮಿ.ಮೀ. ಮಳೆಯಾಗಿದೆ. ಚಳ್ಳಕೆರೆ 1.3, ನಾಯಕನಹಟ್ಟಿ 9.4, ತಳುಕು 11.8, ಚಿತ್ರದುರ್ಗ 1 ರಲ್ಲಿ 3.4, ಚಿತ್ರದುರ್ಗ 2 ರಲ್ಲಿ 7.9, ಹಿರೇಗುಂಟನೂರು 3, ಐನಹಳ್ಳಿ 10.6, ಭರಮಸಾಗರ 8, ಸಿರಿಗೆರೆ 13.6, ತುರುವನೂರು 3.4, ಹಿರಿಯೂರು 11.2, ಬಬ್ಬೂರು 13.2, ಈಶ್ವರಗೆರೆ 16.6, ಇಕ್ಕನೂರು 10.4, ಸೂಗೂರು 4.5, ಹೊಳಲ್ಕೆರೆ 14.8, ರಾಮಗಿರಿ 10.2, ಚಿಕ್ಕಜಾಜೂರು 2.5, ಬಿ.ದುರ್ಗ 3.2, ಹೆಚ್.ಡಿ.ಪುರ 30, ತಾಳ್ಯ 18.4, ಹೊಸದುರ್ಗ 16.4, ಬಾಗೂರು 5.2, ಮತ್ತೋಡು 9, ಮಾಡದಕೆರೆ 20, ಮೊಳಕಾಲ್ಮೂರು 3,

ಪ್ಲಾಸ್ಟಿಕ್ ನಮ್ಮಿಂದಲೇ ಉತ್ಪಾದನೆಯಾಗಿ, ನಮ್ಮಿಂದಲೇ ನಾಶವಾಗಬೇಕು: ಪರಿಸರವಾದಿ ಡಾ. ಎಚ್. ಕೆ. ಎಸ್. ಸ್ವಾಮಿ.

  ಭೂಮಿಯ ಮೇಲೆ ಇರುವ ಯಾವ ಜೀವಿಗೂ ಸಹ ಪ್ಲಾಸ್ಟಿಕ್ ನ್ನು ನಿರ್ಮೂಲ ಮಾಡುವ ಶಕ್ತಿ ಇಲ್ಲ, ಅಂತಹ ಒಂದು ಕೀಟವನ್ನು, ಕ್ರಿಮಿಯನ್ನು, ಸೂಕ್ಷಜೀವಿ, ಪ್ರಾಣಿಯನ್ನು, ಮನುಷ್ಯನಿಂದ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಪ್ಲಾಸ್ಟಿಕ್ ನಾಶ ಮಾಡುವ ಕೀಟ, ಸೂಕ್ಷಜೀವಿ, ಕ್ರಿಮಿಯನ್ನು, ಉತ್ಪಾದನೆ ಮಾಡಿದರೆ ಅದು ಎಲ್ಲಾ ಉಪಯೋಗಿ ಪ್ಲಾಸ್ಟಿಕ್ ವಸ್ತುಗಳನ್ನು ತಿಂದು ದೊಡ್ಡ ಅನಾಹುತವನ್ನೇ ಉಂಟು ಮಾಡುತ್ತದೆ. ಹಾಗಾಗಿ, ಹಿತಮಿತವಾಗಿ ಪ್ಲಾಸ್ಟಿಕ್ ಅನ್ನು ಬಳಕೆ ಮಾಡುವುದೇ ಹೆಚ್ಚು ಸೂಕ್ತವಾದ ಉಪಾಯವಾಗಿದೆ ಎಂದು ಪರಿಸರವಾದಿ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು. ಅವರು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜಾನ್ ಮೈನ್ಸ್ ವತಿಯಿಂದ, ಸಿರಿಗೆರೆ ಸರ್ಕಾರಿ ಹಿರಿಯ ಬಾಲಕರ

ವಿಶ್ವ ಭೂ ದಿನಾಚರಣೆ: ಮಕ್ಕಳಿಗಾಗಿ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳೋಣ -ಪರಿಸರವಾದಿ ಡಾ. ಎಚ್. ಕೆ. ಎಸ್. ಸ್ವಾಮಿ

  ಮಕ್ಕಳಿಗಾಗಿ, ಮುಂದಿನ ಜನಾಂಗಕ್ಕಾಗಿ, ಏನನ್ನೂ ಉಳಿಸದೆ, ಬದುಕಿಗೆ ಆಸ್ಪದವಿಲ್ಲದಂತ ಪರಿಸರ ನಿರ್ಮಾಣ ಮಾಡಿ, ಜೀವಿಸಲು ಅಸಾಧ್ಯವಾದಂತಹ ವಾತಾವರಣವನ್ನು ನಿರ್ಮಿಸಿ, ಮಕ್ಕಳಿಂದ ಬದುಕುವ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದೇವೆ, ಇಂತಹ ನಡತೆಯನ್ನು ನಾವು ಸರಿಪಡಿಸಿಕೊಂಡು, ಮುಂದಿನ ಮಕ್ಕಳ ಭವಿಷ್ಯಕ್ಕಾಗಿ, ಸುಂದರ ಪರಿಸರವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಪರಿಸರವಾದಿ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು. ಅವರು ಮಕ್ಕಳಿಗಾಗಿ ಕಲಾ ಚೈತನ್ಯ ಸೇವಾ ಸಂಸ್ಥೆ, ಪರಿಸರ ತಂಡ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವ ಭೂ ದಿನಾಚರಣೆ, ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮಕ್ಕಳಿಗೆ ಆಸ್ತಿ ಮಾಡುವುದು, ಹಣ ಸಂಗ್ರಹಿಸುವುದು, ಮಾಡುವುದಕ್ಕಿಂತ, ಸುಂದರ ಪರಿಸರವನ್ನು, ಸ್ವಚ್ಛವಾದ, ಗಾಳಿ, ನೀರು, ಮಣ್ಣನ್ನು, ಒದಗಿಸಿಕೊಡಬೇಕಾಗಿದೆ.